ಕಾಪು : ಕುಂಜೂರಿನಲ್ಲಿ ಸಮವಸ್ತ್ರ ವಿತರಣೆ
Thumbnail
ಕಾಪು : ಎಲ್ಲೂರು ಗ್ರಾಮದ ಕುಂಜೂರು ಶ್ರೀ ದುರ್ಗಾ ಮಿತ್ರ ವೃಂದದ ಅಂಗ ಸಂಸ್ಥೆ ದುರ್ಗಾ ಮಿತ್ರ ವೃಂದದ ಮಹಿಳಾ ಘಟಕದ ಭಜನಾ ತಂಡದ 32 ಮಹಿಳಾ ಸದಸ್ಯರಿಗೆ ಹಾಗೂ 12 ಬಾಲಕ - ಬಾಲಕಿಯರಿಗೆ ಸುಮಾರು ನಲ್ವತ್ತು ಸಾವಿರ ರೂಪಾಯಿ ಮೌಲ್ಯದ ಸಮವಸ್ತ್ರವನ್ನು ವಿತರಿಸಲಾಯಿತು. ಎರ್ಮಾಳು ನೈಮಾಡಿ ನಾರಾಯಣ ಕೆ.ಶೆಟ್ಟಿ ಅವರು‌ ಸಮವಸ್ತ್ರದ ಪ್ರಾಯೋಜಕರು. ಕುಂಜೂರು ಶ್ರೀ ದುರ್ಗಾ ದೇವಸ್ಥಾನದ ಅರ್ಚಕರಾದ ಹರಿಕೃಷ್ಣ ಉಡುಪ, ಕೆ.ಎಲ್.ಕುಂಡಂತಾಯ ಅವರು ಸಮವಸ್ತ್ರ ವಿತರಿಸಿದರು. ಮಿತ್ರವೃಂದದ ಅಧ್ಯಕ್ಷ ಚಂದ್ರಹಾಸ ಆಚಾರ್ಯ, ಮಹಿಳಾ ಘಟಕದ ಅಧ್ಯಕ್ಷರಾದ‌ ಶ್ರೀಮತಿ ಜ್ಯೋತಿ ಟೀಚರ್ ಉಪಸ್ಥಿತರಿದ್ದರು. ದುರ್ಗಾ ಮಿತ್ರವೃಂದದ ಮಹಿಳಾ ಘಟಕದ ಸದಸ್ಯರು ಕಳೆದ ಒಂದು ವರ್ಷದಿಂದ ಕುಣಿತ ಭಜನೆಯನ್ನು ಶಕಿಲಾ ಟೀಚರ್ ಅವರಿಂದ ತರಬೇತಿ ಪಡೆಯುತ್ತಿದ್ದು ಹಲವು ಭಜನಾ ಸ್ಪರ್ಧೆಗಳಲ್ಲಿ, ಜಿಲ್ಲೆಯಲ್ಲದೆ ಉತ್ತರ ಕನ್ನಡದ ಕಾರವಾರದ ವರೆಗೆ ವಿವಿಧ ಭಜನಾ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ.
Additional image
26 Mar 2023, 05:58 PM
Category: Kaup
Tags: