ಪರಿವರ್ತನ್ ಫಿಟ್ನೆಸ್ ಮತ್ತು ವೆಲ್ನೆಸ್ ಸೆಂಟರ್ ಕಾಪು : ಮಕ್ಕಳಿಗಾಗಿ‌ ಕಿಡ್ಸ್ ಸಮ್ಮರ್ ಕ್ಯಾಂಪ್ - 2023
Thumbnail
ಮಕ್ಕಳಿಗಾಗಿ ಬೇಸಿಗೆಯ ರಜೆಯನ್ನು ಮಜವನ್ನಾಗಿಸುವ ನಿಟ್ಟಿನಲ್ಲಿ 4 ವರ್ಷ ಮೇಲ್ಪಟ್ಟ ಮಕ್ಕಳಿಗಾಗಿ ಮನೋರಂಜನಾತ್ಮಕ ಮತ್ತು ಕ್ರಿಯಾತ್ಮಕತೆ ಜೊತೆಗೆ ಹೊರಾಂಗಣದ ಚಟುವಟಿಕೆಗಳಿಂದ ಕೂಡಿದ ಕಿಡ್ಸ್ ಸಮ್ಮರ್ ಕ್ಯಾಂಪ್ - 2023ನ್ನು ಪರಿವರ್ತನ್ ಫಿಟ್ನೆಸ್ ಮತ್ತು ವೆಲ್ನೆಸ್ ಸೆಂಟರ್ ಕಾಪು ಇವರು ಕಾಪುವಿನ ಜನಾರ್ಧನ್ ಕಾಂಪ್ಲೆಕ್ಸ್ ನ ಮೊದಲ ಮಹಡಿಯಲ್ಲಿ ಏಪ್ರಿಲ್ ಮತ್ತು ಮೇನಲ್ಲಿ 2 ಬ್ಯಾಚ್ ಗಳ ಮೂಲಕ ಆಯೋಜಿಸಿರುತ್ತಾರೆ. ಏಪ್ರಿಲ್ 10 ರಿಂದ 28 ರವರೆಗೆ ಮೊದಲ ಬ್ಯಾಚ್ ಮತ್ತು ಮೇ 1 ರಿಂದ 20ರವರೆಗೆ ಎರಡನೆಯ ಬ್ಯಾಚ್ ಜರಗಲಿದೆ. ಮಕ್ಕಳಿಗಾಗಿ ಕತೆ ಹೇಳುವುದು, ನೃತ್ಯ, ಮನೋರಂಜನಾ ಆಟಗಳು, ಕರಾಟೆ, ಯಕ್ಷಗಾನ, ಯೋಗ ಮತ್ತು ಧ್ಯಾನ, ಹೊರ ಪ್ರವಾಸ ಇತ್ಯಾದಿ ಅನೇಕ ಚಟುವಟಿಕೆಗಳು ಇರಲಿದೆ. ಕೆಲವೇ ಸೀಟುಗಳು ಬಾಕಿ ಇವೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 8971735243
04 Apr 2023, 07:25 PM
Category: Kaup
Tags: