ಹೆಜಮಾಡಿ : ದಾಖಲೆಗಳಿಲ್ಲದ್ದ 4.79 ಲಕ್ಷ ರೂ. ಮೌಲ್ಯದ ಸಿಗರೇಟ್ ವಶ
Thumbnail
ಹೆಜಮಾಡಿ : ಚುನಾವಣೆಯ ನಿಮಿತ್ತ ಹೆಜಮಾಡಿ ಚೆಕ್‌ಪೋಸ್ಟ್ ಬಳಿ ಅಧಿಕಾರಿಗಳು, ಪೋಲಿಸರು ತಪಾಸಣೆಯಲ್ಲಿದ್ದಾಗ ಕಾರು ಮತ್ತು ಯಾವುದೇ ದಾಖಲೆ ಇಲ್ಲದ 4.79 ಲಕ್ಷ ರೂ. ಮೌಲ್ಯದ ಸಿಗರೇಟ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಕಾಪು ತಾಲೂಕು ಹೆಜಮಾಡಿ ಚೆಕ್ ಪೋಸ್ಟ್ ನಲ್ಲಿ ವಾಹನ ತಪಾಸಣೆ ಆಗುತ್ತಿದ್ದ ಸಂದರ್ಭ ಮಂಗಳೂರು ಕಡೆಯಿಂದ ಬಂದ ಕಾರಿನಲ್ಲಿ ಕಾರು ಚಾಲಕ ಅಬ್ದುಲ್ ಖಾದರ್ ಅನ್ಸಾರ್ ಹಾಗೂ ಸುಫಿಯಾನ್‌ ಶೌರಿ ಇವರು ಯಾವುದೇ ದಾಖಲೆ ಇಲ್ಲದ 10 ಸಿಗರೇಟ್‌ ತುಂಬಿಸಿದ 20 ಪ್ಯಾಕ್‌ಗಳಿರುವ 120 ಬಂಡಲ್‌, ನಿಷೇಧೀತ  E-Cigarette ತಲಾ 3 ಬಂಡಲ್‌ನಲ್ಲಿ ತಲಾ 10 ರಂತೆ ಒಟ್ಟು 30 ಸಿಗರೇಟ್‌ಗಳು ಇದ್ದು ಅವುಗಳ ಒಟ್ಟು ಮೌಲ್ಯ ರೂಪಾಯಿ 4,79,970 ಆಗಿದ್ದು,  ಸಿಗರೇಟು ಬಂಡಲ್‌ಗಳನ್ನು ಮಂಜೇಶ್ವರ ಬಾಯಾರಿನ ಮೊಯ್ನು ಎಂಬಾತನು ಆರೋಪಿತರಿಗೆ ನೀಡಿ, ಅವುಗಳನ್ನು ಮಣಿಪಾಲದ ಸೈಫು ಎಂಬುವವನಿಗೆ ನೀಡುವಂತೆ ತಿಳಿಸಿರುವುದಾಗಿರುತ್ತದೆ. ಪೋಲಿಸರು ಸ್ವತ್ತುಗಳನ್ನು ಹಾಗೂ ಸಾಗಾಟಕ್ಕೆ ಉಪಯೋಗಿಸಿದ ಕಾರನ್ನು ಸ್ವಾಧೀನಪಡಿಸಿಕೊಂಡಿದ್ದಾರೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
18 Apr 2023, 07:00 PM
Category: Kaup
Tags: