ಮತಯಾಚನೆಯೊಂದಿಗೆ ದೈವ-ದೇವರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ
Thumbnail
ಕಾಪು : ಭಾರತೀಯ ಜನತಾ ಪಾರ್ಟಿಯ ಕಾಪು ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ ಹಾಗೂ ಶಾಸಕರಾದ ಲಾಲಾಜಿ ಆರ್ ಮೆಂಡನ್ ಅವರು ಇಂದು ಎರ್ಮಾಳು ಜನಾರ್ಧನ ದೇವಸ್ಥಾನ, ವೀರಭದ್ರ ದೇವಸ್ಥಾನ ಎರ್ಮಾಳು, ನಡಿಯಾಳು ಧೂಮಾವತಿ ದೇವಸ್ಥಾನ ಹಾಗೂ ವಿವಿದೆಡೆ ತೆರಳಿ ದೈವ -ದೇವರ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಜಯಶ್ರೀ ತೆಂಕ, ಪಡುಬಿದ್ರಿ ಮಹಾಶಕ್ತಿಕೇಂದ್ರ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ ಎಲ್ಲದಡಿ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷೆ ಗೀತಾಂಜಲಿ ಸುವರ್ಣ, ಹಿರಿಯರಾದ ಗಂಗಾಧರ್ ಸುವರ್ಣ, ತಾಲೂಕು ಪಂಚಾಯತ್ ಮಾಜಿ ಸದಸ್ಯ ಕೇಶವ ಮೊಯ್ಲಿ, ಪಕ್ಷದ ಅನನ್ಯ ಜವಾಬ್ದಾರಿ ನಿರ್ವಹಿಸುತ್ತಿರುವ ಪ್ರಮುಖರು ಹಾಗೂ ಸ್ಥಳೀಯ ಪ್ರಮುಖರಾದ ಸತೀಶ್ ಸಾಲ್ಯಾನ್, ವಿನಯ ಶೆಟ್ಟಿ, ಧರ್ಮರಾಜ್, ಸಂತೋಷ್, ಅಮನಿ, ಮನೋಜ್, ದೀರಾಜ್, ಮೋಹನ್ ಸುವರ್ಣ, ವಿನೀತ್, ನಿತೇಶ್ ಕುಮಾರ್, ಪವನ್ ಎರ್ಮಾಳು, ಜಯೇಂದ್ರ, ಗಣೇಶ್ ಹಾಗೂ ಕಾರ್ಯಕರ್ತರು, ಸ್ಥಳೀಯರು ಉಪಸ್ಥಿತರಿದ್ದರು.
Additional image Additional image Additional image
26 Apr 2023, 02:17 PM
Category: Kaup
Tags: