ಕಟಪಾಡಿ : ಕನ್ನಡ ಚಲನಚಿತ್ರ - ಸ್ಕೂಲ್ ಲೀಡರ್ ಚಿತ್ರದ ಮುಹೂರ್ತ
Thumbnail
ಕಟಪಾಡಿ : ಸನ್ ಮ್ಯಾಟ್ರಿಕ್ಸ್ ಅರ್ಪಿಸುವ ಫಿಲಂ ವ್ಹೀಲ್ ಸ್ಟುಡಿಯೋಸ್ ಸಹಯೋಗದೊಂದಿಗೆ ಕನ್ನಡ ಚಲನಚಿತ್ರ ಸ್ಕೂಲ್ ಲೀಡರ್ ಚಿತ್ರದ ಮುಹೂರ್ತ ಶುಕ್ರವಾರ ಕಟಪಾಡಿ ಶ್ರೀ ವೆಂಕಟರಮಣ ದೇವಳದಲ್ಲಿ ಜರಗಿತು. ಈ ಸಂದರ್ಭ ಗಣ್ಯರು ಶುಭ ಹಾರೈಸಿದರು. ಈ ಸಂದರ್ಭ ಕಿರುತೆರೆ ನಟ ಪ್ರದೀಪ್ ಚಂದ್ರ ಕುದ್ಪಾಡಿ, ಎಸ್ ವಿ ಎಸ್ ವಿದ್ಯಾವರ್ಧಕ ಸಂಘ ಕಟಪಾಡಿಯ ಗಣೇಶ್ ಕಿಣಿ, ಮಂಗಳೂರಿನ ಉದ್ಯಮಿ ಹರ್ಷಮಣಿ ರೈ, ಎಸ್ ವಿ ಎಸ್ ಪದವಿ ಪೂರ್ವ ಕಾಲೇಜು ಕಟಪಾಡಿಯ ಪ್ರಾಂಶುಪಾಲರಾದ ಡಾ. ದಯಾನಂದ ಪೈ, ಚಲನಚಿತ್ರ ನಟ ರಘು ಪಾಂಡೇಶ್ವರ, ಎಸ್ ವಿ ಎಸ್ ಪ್ರೌಢಶಾಲೆ ಕಟಪಾಡಿಯ ಮುಖ್ಯ ಶಿಕ್ಷಕ ಸುಬ್ರಹ್ಮಣ್ಯ ತಂತ್ರಿ, ಪೆನ್ಸಿಲ್ ಬಾಕ್ಸ್ ಚಿತ್ರದ ನಿರ್ಮಾಪಕ ದಯಾನಂದ ಎಸ್ ರೈ, ಬಾಸುಮ ಕೊಡಗು, ಶೇಖರ ಅಜೆಕಾರು, ಪುರುಷೋತ್ತಮ ಪೈ, ಸುದರ್ಶನ್ ಎಸ್ ಪುತ್ತೂರು, ಚಿತ್ರ ನಿರ್ಮಾಪಕರಾದ ಸತ್ಯೇಂದ್ರ ಪೈ, ಬಾಲಕೃಷ್ಣ ಶೆಟ್ಟಿ, ಚಿತ್ರದ ನಿರ್ದೇಶಕ ರಝಾಕ್ ಪುತ್ತೂರು, ಅಕ್ಷತ್, ಮೋಹನ್ ಪಡ್ರೆ, ಪ್ರಕಾಶ್ ಸುವರ್ಣ, ನಾಗೇಶ್ ಕಾಮತ್ ಉಪಸ್ಥಿತರಿದ್ದರು.
Additional image Additional image
27 May 2023, 05:47 PM
Category: Kaup
Tags: