ಕಾಪು : ಪುರಸಭಾ ವ್ಯಾಪ್ತಿಯ ಕುಂದು ಕೊರತೆ ಬಗ್ಗೆ ಪುರಸಭಾ ಸದಸ್ಯರು, ಇಲಾಖಾಧಿಕಾರಿಗಳೊಂದಿಗೆ ಶಾಸಕರ ಸಭೆ
Thumbnail
ಕಾಪು : ಇಲ್ಲಿನ ಪುರಸಭಾ ವ್ಯಾಪ್ತಿಯ ಕುಂದು ಕೊರತೆ ಬಗ್ಗೆ ಇಂದು ಕಾಪು ಪುರಸಭೆಯ ಸಭಾಂಗಣದಲ್ಲಿ ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಪುರಸಭಾ ಸದಸ್ಯರು ಹಾಗೂ ಪುರಸಭೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಈ ಸಂದರ್ಭ ‌ಮಾತನಾಡಿದ‌ ಶಾಸಕರು ಮುಂಗಾರು ಆರಂಭಗೊಳ್ಳಲಿದ್ದು ಮುಂಜಾಗ್ರತವಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸೂಚಿಸಿದರು. ಪುರಸಭಾ ಇಲಾಖಾಧಿಕಾರಿಗಳು ಕ್ಲಪ್ತ ಸಮಯದಲ್ಲಿ ಕಚೇರಿಗೆ ಆಗಮಿಸಿ ಶೀಘ್ರವಾಗಿ ಕಡತವಿಲೆವಾರಿಗೆ ಹಾಗೂ ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸುವಂತೆ ಸೂಚಿಸಿದರು. ಈ ಸಂದರ್ಭ ಕಾಪು ಪುರಸಭೆಯ ಪ್ರಭಾರಿ ಮುಖ್ಯಾಧಿಕಾರಿಗಳಾದ ಸಂತೋಷ್, ನಗರ ಯೋಜಕರಾದ ಅಭಿಲಾಶ್ ಹಾಗೂ ಪುರಸಭೆಯ ಸದಸ್ಯರು, ಪುರಸಭೆಯ ಅಭಿಯಂತರರು, ವಿಷಯ ನಿರ್ವಾಹಕರು ಉಪಸ್ಥಿತರಿದ್ದರು.
02 Jun 2023, 08:53 PM
Category: Kaup
Tags: