ಉಡುಪಿ : ಮಹಿಳಾ ಕುಸ್ತಿ ಪಟುಗಳನ್ನು ಬೆಂಬಲಿಸಿ ವಿಮೆನ್ ಇಂಡಿಯಾ ಮೂವ್ಮೆಂಟ್ ಕರ್ನಾಟಕ ವತಿಯಿಂದ ಪ್ರತಿಭಟನೆ
ಕಾಪು : ಮಹಿಳಾ ಕುಸ್ತಿ ಪಟುಗಳಿಗೆ ಕಿರುಕುಳ ನೀಡಿದ ಪೋಸ್ಕೊ ಆರೋಪಿ ಬಿಜೆಪಿ ಸಂಸದರನ್ನು ಬಂಧಿಸಲು ಆಗ್ರಹಿಸಿ ವಿಮೆನ್ ಇಂಡಿಯಾ ಮೂವ್ಮೆಂಟ್ ಕರ್ನಾಟಕ ಇವರು ಪ್ರತಿಭಟನೆ ನಿರತ ಕುಸ್ತಿಪಟುಗಳನ್ನು ಬೆಂಬಲಿಸಿ ಕಾಪು ಪೇಟೆಯಲ್ಲಿ ಶನಿವಾರ ಮುಸ್ಲಿಂ ಮಹಿಳೆಯರು ಬ್ರಹತ್ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ವಿಮೆನ್ ಇಂಡಿಯಾ ಮೂವ್ ಮೆಂಟ್ ನ ಅಧ್ಯಕ್ಷೆ ನಾಝಿಯ ಮಾತನಾಡಿ ಮಹಿಳೆಯರ ಮೇಲೆ ದೌರ್ಜನ್ಯ ನೋಡಿಯೂ ಕಣ್ಣು ಮುಚ್ಚಿ ಕುಳಿತ ಕೇಂದ್ರ ಸರಕಾರದ ವಿರುದ್ಧ ಕಿಡಿ ಕಾರಿದರು. ನಾವು ಆರಿಸಿ ಕಳುಹಿಸಿದ ಸಂಸದರು ಬರೇ ಸಂಬಳವನ್ನು ತೆಗೆದುಕೊಳ್ಳುವ ಬದಲು ಮಹಿಳೆಯರ ಬಗ್ಗೆ ಸ್ವಲ್ಪ ಕಾಳಜಿಯಿಂದ ವರ್ತಿಸಲಿ. ಬಿಜೆಪಿ ಸರ್ಕಾರ ಅತ್ಯಾಚಾರಕ್ಕೆ ಕುಮ್ಮಕ್ಕು ನೀಡುವ ಮೂಲಕವೇ ಅತ್ಯಾಚಾರಿಗಳನ್ನು ರಕ್ಷಿಸುವ ಕೆಲಸ ಮಾಡುತ್ತದೆ ಎಂದರು.
ಪ್ರತಿಭಟನೆಯಲ್ಲಿ ಕಾರ್ಯದರ್ಶಿ ರಹಿಮಾ ಕಾಪು,ಜಿಲ್ಲಾ ಉಪಾಧ್ಯಕ್ಷೆ ನಸೀಮಾ, ಕಾಪು ಅಧ್ಯಕ್ಷೆ ಫರ್ಝಾನಾ,ಕಾರ್ಯದರ್ಶಿ ನೌಶೀನ್ ಮುಂತಾದವರು ಇದ್ದರು.
