ಪಡುಬಿದ್ರಿ : ನಿವೃತ್ತ ಬಿಎಸ್‌ಎಫ್ ಕಮಾಂಡೆಂಟ್ ಪಿ.ಎ. ಮೊಹಿದ್ದೀನ್ ಸನ್ಮಾನ
Thumbnail
ಪಡುಬಿದ್ರಿ: ಗಡಿ ಭದ್ರತಾ ಪಡೆಯಲ್ಲಿ ಸುಮಾರು ೩೫ ವರ್ಷಗಳ ಕಾಲ ಸೇವೆ ಸಲ್ಲಿಸಿ ಅಸಿಸ್ಟೆಂಟ್ ಕಮಾಂಡೆಂಟ್ ಆಗಿ ನಿವೃತ್ತ ಹೊಂದಿದ ಪಡುಬಿದ್ರಿ ಜಮಾಅತ್ ಸದಸ್ಯರಾದ ಪಿ.ಎ. ಮೊಹಿದ್ದೀನ್ ಅವರನ್ನು ಪಡುಬಿದ್ರಿ ಜಮಾಅತ್ ಸಮಿತಿಯ ವತಿಯಿಂದ ಶುಕ್ರವಾರ ಸನ್ಮಾನಿಸಲಾಯಿತು. ಬಿಎಸ್‌ಎಫ್‌ನಲ್ಲಿ ೩೫ ವರ್ಷಗಳ ಕಾಲ ದೇಶದ ಹಲವು ರಾಜ್ಯಗಳಲ್ಲಿ ಸೇವೆ ಸಲ್ಲಿಸಿ ವಿವಿಧ ಹುದ್ದೆಗಳನ್ನು ಅಲಂಕರಿಸಿ ಅಸಿಸ್ಟೆಂಟ್ ಕಮಾಂಡೆಂಟ್ ಇತ್ತೀಚೆಗೆ ನಿವೃತ್ತರಾದ ಪಿ.ಎ. ಮೊಹಿದ್ದೀನ್ ಅವರನ್ನು ಪಡುಬಿದ್ರಿ ಜುಮ್ಮಾ ಮಸೀದಿಯಲ್ಲಿ ನಡೆದ ಸಮಾರಂಭದಲ್ಲಿ ಜುಮ್ಮಾ ಮಸೀದಿ ಖತೀಬ್ ಎಸ್.ಎಮ್. ಅಬ್ದುಲ್ ರಹ್ಮಾನ್ ಮದನಿ ಸನ್ಮಾನಿಸಿದರು. ಇದೇ ಸಂದರ್ಭದಲ್ಲಿ ಹಜ್ ಯಾತ್ರೆಕೈಗೊಳ್ಳಲಿರುವ ಜಮಾಅತ್ ಸದಸ್ಯ ವೈ. ಜಲೀಲ್ ಸಾಹೇಬ್ ಅವರನ್ನು ಅಭಿನಂದಿಸಿ ಬೀಳ್ಕೊಡಲಾಯಿತು. ಪಡುಬಿದ್ರಿ ಜುಮ್ಮಾ ಮಸೀದಿ ಅಧ್ಯಕ್ಷ ಹಾಜಿ ಪಿ.ಕೆ. ಮಯ್ಯದ್ದೀನ್ ಲಚ್ಚಿಲ್, ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಶೇಖ್ ಇಸ್ಮಾಯಿಲ್ ಮಾಸ್ಟರ್, ಉಪಾಧ್ಯಕ್ಷ ಅಬ್ದುಲ್ ಶುಕೂರ್ ದಾವೂದ್ ಸಾಹೇಬ್, ಕೋಶಾಧಿಕಾರಿ ಎ.ಎಚ್. ಮುಹಮ್ಮದ್ ಹಾಜಿ, ಮಾಜಿ ಅಧ್ಯಕ್ಷ ಹಾಜಿ ಪಿ.ಎ. ಅಬ್ದುಲ್ ರಹ್ಮಾನ್, ಹಾಜಿ ಎಂ.ಎಚ್. ಹಮ್ಮಬ್ಬ, ಜಮಾಅತ್ ಸದಸ್ಯರಾದ ಪಿ.ಎಂ, ಅಕ್ಬರ್, ನಜೀರ್ ಸಿ.ಪಿ ಕಂಚಿನಡ್ಕ, ಹಂಝ ಅಬ್ಬಾಸ್, ಮಯ್ಯದ್ದಿ ಮಜಲಕೋಡಿ, ಇಮ್ತಿಯಾಝ್ ಚಾಬು ಸಾಹೇಬ್, ಇಸ್ಮಾಯಿಲ್ ಕಾಡಿಪಟ್ಣ, ಭಾಷಾ ಬೇಂಗ್ರೆ ಉಪಸ್ಥಿತರಿದ್ದರು.
10 Jun 2023, 07:02 AM
Category: Kaup
Tags: