ಹೆಜಮಾಡಿ : ಮೊಗವೀರ ಮಹಾಸಭಾದ ವತಿಯಿಂದ ನೂತನ ಶಾಸಕರಿಗೆ ಸನ್ಮಾನ
Thumbnail
ಹೆಜಮಾಡಿ : ಇಲ್ಲಿನ ಮೊಗವೀರ ಮಹಾಸಭಾದ ವತಿಯಿಂದ ಕಾಪು ವಿಧಾನಸಭಾ ಕ್ಷೇತ್ರದ ನೂತನ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಹಾಗೂ ಉಡುಪಿ ವಿಧಾನಸಭಾ ಕ್ಷೇತ್ರದ ನೂತನ ಶಾಸಕರಾದ ಯಶ್ ಪಾಲ್ ಸುವರ್ಣ ಸುವರ್ಣ ಅವರ ಅಭಿನಂದನಾ ಸಮಾರಂಭ ಇಂದು ಹೆಜಮಾಡಿ ಬೊಬ್ಬರ್ಯ ದೇವಸ್ಥಾನದ ವಠಾರದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಮೊಗವೀರ ಮಹಾಜನ (ರಿ.) ಹೆಜಮಾಡಿ ಅಧ್ಯಕ್ಷರಾದ ರವಿ ಕುಂದರ್, ಹೆಜಮಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪಾಂಡುರಂಗ ಕರ್ಕೇರ, ಗುರಿಕಾರರಾದ ಪುರುಶೋತ್ತಮ್, ರಾಘವ, ಹೆಜಮಾಡಿ ಗ್ರಾಮ ಪಂಚಾಯತ್ ಸದಸ್ಯರಾದ ರಮೇಶ್ ಪುತ್ರನ್ ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.
11 Jun 2023, 12:53 PM
Category: Kaup
Tags: