ಲಯನ್ಸ್ ಕ್ಲಬ್ ಉದ್ಯಾವರ ಸನ್ ಸೈನ್ : ನೂತನ ಅಧ್ಯಕ್ಷರಾಗಿ ಪ್ರೇಮ್ ಮಿನೇಜಸ್ ಆಯ್ಕೆ
Thumbnail
ಉದ್ಯಾವರ : ಲಯನ್ಸ್ ಜಿಲ್ಲೆ 317C ಗೆ ಒಳಪಟ್ಟ ಲಯನ್ ಕ್ಲಬ್ ಉದ್ಯಾವರ ಸನ್ ಶೈನ್ ಇದರ 2023- 24ನೇ ಸಾಲಿನ ನೂತನ ಅಧ್ಯಕ್ಷರಾಗಿ ಉದ್ಯಮಿ ಲಯನ್ ಪ್ರೇಮ್ ಮಿನೇಜಸ್ ಆಯ್ಕೆಯಾಗಿದ್ದಾರೆ. ಐದು ವರ್ಷಗಳ ಹಿಂದೆ ಆರಂಭಗೊಂಡಿರುವ ಲಯನ್ ಕ್ಲಬ್ ಉದ್ಯಾವರ ಸನ್ ಸೈನ್, ಇತ್ತೀಚೆಗೆ ನಡೆದ ಮಾಸಿಕ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಿತು. ಮಮ್ಮಿ ಡಿಜಿಟಲ್ ಸ್ಟುಡಿಯೋ ಮಾಲಕರಾಗಿರುವ ಲಯನ್ ಪ್ರೇಮ್ ಮಿನೇಜಸ್ ಅಧ್ಯಕ್ಷರಾಗಿ ಆಯ್ಕೆಯಾದರೆ, ಡಿಜಿಟಲ್ ಸೇವಾ ಕೇಂದ್ರ ಇದರ ಲಯನ್ ಹರೀಶ್ಚಂದ್ರ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ. ಲಯನ್ ರೋಷನ್ ಕ್ರಾಸ್ಟೋ ಕೋಶಾಧಿಕಾರಿಯಾಗಿ ಮರು ಆಯ್ಕೆಯಾಗಿದ್ದು, ವಿವಿಧ ಹುದ್ದೆಗಳಿಗೆ ಪದಾಧಿಕಾರಿಗಳನ್ನು ಆಯ್ಕೆಗೊಳಿಸಲಾಗಿದೆ. ಚುನಾವಣಾ ಅಧಿಕಾರಿಯಾಗಿ ಮಾಜಿ ಅಧ್ಯಕ್ಷ ಲಯನ್ ಜೋನ್ ಫೆರ್ನಾಂಡಿಸ್ ಪದಾಧಿಕಾರಿಗಳ ಆಯ್ಕೆ ಘೋಷಿಸಿದರು. ಈ ಸಂದರ್ಭದಲ್ಲಿ ಅಧ್ಯಕ್ಷ ಲಯನ್ ಅನಿಲ್ ಲೋಬೊ, ಕಾರ್ಯದರ್ಶಿ ಲಯನ್ ಸ್ಟೀವನ್ ಕುಲಾಸೊ, ಕೋಶಾಧಿಕಾರಿ ಲಯನ್ ರೋಷನ್ ಕ್ರಾಸ್ಟೋ ಉಪಸ್ಥಿತರಿದ್ದರು.
14 Jun 2023, 06:27 PM
Category: Kaup
Tags: