ಉಡುಪಿ : ವಿಧಾನಸಭಾ ಚುನಾವಣೆಯಲ್ಲಿ ಜನರು ಸಹಕಾರ ಮಾಡಲಿಲ್ಲ, ಕಾರಣಗಳು ಅನೇಕ - ಯೋಗೀಶ್ ವಿ ಶೆಟ್ಟಿ
Thumbnail
ಉಡುಪಿ : ಜಿಲ್ಲಾ ಜನತಾದಳ( ಜಾತ್ಯತೀತ ) ಪಕ್ಷದ ಚಿಂತನಾ ಸಭೆಯು ಗುರುವಾರ ಜಿಲ್ಲಾಧ್ಯಕ್ಷರಾದ ಯೋಗೀಶ್ ವಿ ಶೆಟ್ಟಿ ಯವರ ಅಧ್ಯಕ್ಷತೆಯಲ್ಲಿ ಉಡುಪಿ ಜಿಲ್ಲಾ ಪಕ್ಷ ಕಚೇರಿಯಲ್ಲಿ ಜರಗಿತು. ಈ ಸಂದರ್ಭ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ನಮ್ಮ ಪಕ್ಷದ ಸರಕಾರ ಅಧಿಕಾರಕ್ಕೆ ಬರುತ್ತದೆ ಎಂಬ ಆಶಾ ಭಾವನೆಯಲ್ಲಿದ್ದು, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರ ನವ ಕರ್ನಾಟಕ ನಿರ್ಮಾಣಕ್ಕಾಗಿ ಹಲವಾರು ಕಾರ್ಯಕ್ರಮಗಳನ್ನು ಹಾಕಿಕೊಂಡು ಜನತಾ ಜಲಧಾರೆ, ಪಂಚರತ್ನ ಯೋಜನೆಯ ಸೂತ್ರಗಳ ಪ್ರಕಾರ, ಶಿಕ್ಷಣ, ಆರೋಗ್ಯ, ರೈತ ಚೈತನ್ಯ, ಯುವನವ ಮಾರ್ಗ ಮತ್ತು ಮಹಿಳಾ ಸಬಲೀಕರಣ, ವಸತಿ ಆಸರೆ, ಗಳನ್ನು ಮುಂದಿಟ್ಟು ಮಾದರಿ ಕರ್ನಾಟಕ ನಿರ್ಮಾಣಕ್ಕಾಗಿ ತುಂಬಾ ಹೋರಾಟವನ್ನು ಮಾಡಿದರು. ಆದರೂ ಜನರು ಸಹಕಾರ ಮಾಡಲಿಲ್ಲ, ಕಾರಣಗಳು ಅನೇಕ ಇದೆ ಎಂದು ಸಭೆಗೆ ತಿಳಿಸಿದರು. ಕಾರ್ಯಕರ್ತರು ಎದೆಗುಂದುವುದು ಬೇಡ ಯಾವುದೇ ತೊಂದರೆಯಾದರೆ ಪಕ್ಷ ನಾವಿದ್ದೇವೆ. ಮುಂದೆ ಹೊಸಬರು, ಸಮರ್ಥರನ್ನು ಪಕ್ಷಕ್ಕೆ ಸೇರಿಸಿ ಉಡುಪಿ ಜಿಲ್ಲೆಯಲ್ಲಿ ಪಕ್ಷವನ್ನು ಪುನರ್ ಸಂಘಟಿಸಲಾಗುತ್ತದೆ. ಮುಂದೆ ಬರುವ ತಾಲೂಕು ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಗೆ ನಾವೆಲ್ಲರೂ ಸನ್ನದ್ಧರಾಗಬೇಕೆಂದು ಕಾರ್ಯಕರ್ತರಿಗೆ ಧೈರ್ಯ ತುಂಬಿದರು. ಸಭೆಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಜಯಕುಮಾರ್ ಪರ್ಕಳ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಯರಾಮ ಆಚಾರ್ಯ, ಉಡುಪಿ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಬಾಲಕೃಷ್ಣ ಆಚಾರ್ಯ, ಕುಂದಾಪುರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿದ್ದ ರಮೇಶ್ ಕುಂದಾಪುರ, ಕಾರ್ಕಳ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿದ್ದ ಶ್ರೀಕಾಂತ ಪೂಜಾರಿ, ಕುಚ್ಚೂರು, ನಾಯಕರಾದ ರಾಮರಾವ್, ರಂಗಕೋಟ್ಯಾನ, ಸಂಶುದ್ದೀನ್ ಮಜೂರು, ಉದಯಕುಮಾರ್, ಹಾಗೂ ಪಕ್ಷ ನಾಯಕರು, ಕಾರ್ಯಕರ್ತರು ಉಪಸ್ಥಿತರಿದ್ದರು.
30 Jun 2023, 04:21 PM
Category: Kaup
Tags: