ದೇಶವನ್ನು ಆರ್ಥಿಕವಾಗಿ ಅಭಿವೃದ್ಧಿ ಪಡಿಸುವಲ್ಲಿ ಚಾರ್ಟರ್ಡ್ ಅಕೌಟೆಂಟ್ ಗಳ ಕೊಡುಗೆ ಅಪಾರ : ಸಿ.ಎ ಗೋಪಾಲಕೃಷ್ಣ ಭಟ್
Thumbnail
ಕಟಪಾಡಿ : "ಲೆಕ್ಕ ಪರಿಶೋಧಕರಿಗೆ (ಸಿ.ಎ) ಸಮಾಜದಲ್ಲಿ ಒಂದು ವಿಶೇಷವಾದ ಉನ್ನತ ಸ್ಥಾನಮಾನವಿದೆ. ದೇಶವನ್ನು ಆರ್ಥಿಕವಾಗಿ ಅಭಿವೃದ್ಧಿ ಪಡಿಸುವಲ್ಲಿ ಚಾರ್ಟರ್ಡ್ ಅಕೌಟೆಂಟ್ ಗಳ ಕೊಡುಗೆ ಅಪಾರವಾದದ್ದು, ದೇಶದ ಏಳಿಗೆಗೆ ನಾವು ದುಡಿಯಬೇಕು" ಎಂದು ತ್ರಿಶಾ ಸಂಸ್ಥೆಯ ಅಧ್ಯಕ್ಷರಾದ ಸಿ.ಎ ಗೋಪಾಲಕೃಷ್ಣ ಭಟ್ ರವರು, ಜುಲೈ 1 ರಂದು ತ್ರಿಶಾ ವಿದ್ಯಾ ಕಾಲೇಜು ಕಟಪಾಡಿಯಲ್ಲಿ ಆಚರಿಸಲಾದ 'ಚಾರ್ಟರ್ಡ್ ಅಕೌಂಟೆಂಟ್ಸ್ ಡೇ'ಯಲ್ಲಿ ಹೇಳಿದರು. ಜೊತೆಗೆ ವೇದಿಕೆಯಲ್ಲಿದ್ದ ಸಿ.ಎ ಆದರ್ಶ್ ಶೆಣೈ ಹಾಗೂ ಸಿ.ಎ ನಾಗೇಂದ್ರ ಭಕ್ತ ಇವರು "ಜೀವನದಲ್ಲಿ ಸಾಧನೆ ಯಾವುದೇ ಅದೃಷ್ಟದಿಂದ ಬರುವುದಿಲ್ಲ ಸತತ ಪರಿಶ್ರಮ ಒಂದೇ ಅದರ ಹಾದಿ" ಎಂದು ಹೇಳಿ ಮಕ್ಕಳಿಗೆ ಶುಭ ಹಾರೈಸಿದರು. ತ್ರಿಶಾ ಸಂಸ್ಥೆಯ ಅಧ್ಯಕ್ಷರ ಎಕ್ಸಿಕ್ಯೂಟಿವ್ ಅಸಿಸ್ಟೆಂಟ್ ಐಶ್ವರ್ಯಾ ಕಾಮತ್ ಬಿ. ರವರು ಗಣ್ಯರಿಗೆ 'ರಾಪಿಡ್ ಫಯರ್ ರೌಂಡ್' ನಡೆಸಿದರು. ಕಾರ್ಯಕ್ರಮದಲ್ಲಿ ಸಿದ್ಧಾಂತ್ ಫೌಂಡೇಶನ್ ನ ಖಜಾಂಚಿ ನಮಿತಾ ಜಿ ಭಟ್, ತ್ರಿಶಾ ಸಂಸ್ಥೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಗೌರಿ ಕಾಮತ್ ನಿರೂಪಿಸಿ ವಂದಿಸಿದರು.
02 Jul 2023, 07:35 AM
Category: Kaup
Tags: