ಕಾಪು : ಇನ್ನಂಜೆಯಲ್ಲಿ ಕಂಡೊಡೊಂಜಿ ದಿನ ಸಂಪನ್ನ
ಕಾಪು : ಜೇಸಿಐ ಶಂಕರಪುರ ಜಾಸ್ಮಿನ್, ಸೀನಿಯರ್ ಛೆಂಬರ್ ಇಂಟರ್‌ನ್ಯಾಷನಲ್ ಉಡುಪಿ ಟೆಂಪಲ್ ಸಿಟಿ ಲೀಜನ್, ಯುವಕ ಮಂಡಲ (ರಿ.) ಇನ್ನಂಜೆ, ಯುವತಿ ಮಂಡಲ (ರಿ.) ಇನ್ನಂಜೆ, ರೋಟರಿ ಸಮುದಾಯದಳ ಇನ್ನಂಜೆ, ಬಿಲ್ಲವ ಸಂಘ ಇನ್ನಂಜೆ ರಿಕ್ಷಾ ಚಾಲಕರ ಮತ್ತು ಮಾಲಕರ ಸಂಘ ಶಂಕರಪುರ, ಟೆಂಪೋ ಚಾಲಕರ ಮತ್ತು ಮಾಲಕರ ಸಂಘ ಶಂಕರಪುರ ಸಂಯುಕ್ತ ಆಶ್ರಯದಲ್ಲಿ
ಕೆಸರು ಗದ್ದೆ ಗ್ರಾಮೀಣ ಕ್ರೀಡಾಕೂಟ ಕಂಡೊಡೊಂಜಿ ದಿನ ಭಾನುವಾರ ತೆಂಡೆಮನೆ ಮಾರ್ಕೆಟ್ ರೋಡ್ ಇನ್ನಂಜೆ ಇಲ್ಲಿ ಜರಗಿತು.
ಕಾರ್ಯಕ್ರಮವನ್ನು ಸೀನಿಯರ್ ಛೆಂಬರ್ ಇಂಟರ್ ನ್ಯಾಷನಲ್ ನ ರಾಷ್ಟ್ರೀಯ ಉಪಾಧ್ಯಕ್ಷರಾದ ಎಸ್ಎನ್ಆರ್ ನವೀನ್ ಅಮೀನ್ ಉದ್ಘಾಟಿಸಿದರು.
ಮುಖ್ಯ ಅತಿಥಿಯಾಗಿ ಸಿರಿಲ್ ಮೋನಿಸ್ ಸಾಲ್ಮರ,
ಸುರೇಶ್ ಎನ್ ಪೂಜಾರಿ ಇನ್ನಂಜೆ, ಕೃಷ್ಣ ಅಮೀನ್ ತೆಂಡೆಮನೆ ಇನ್ನಂಜೆ ಭಾಗವಹಿಸಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೇಸಿಐ ಶಂಕರಪುರ ಜಾಸ್ಮಿನ್ ಅಧ್ಯಕ್ಷರಾದ ಜೇಸಿ ಮಾಲಿನಿ ಶೆಟ್ಟಿ ವಹಿಸಿದ್ದರು.
ಸೀನಿಯರ್ ಇಂಟರ್ ನ್ಯಾಷನಲ್ ಉಡುಪಿ ಟೆಂಪಲ್ ಸಿಟಿ ಲೀಜನ್ ಅಧ್ಯಕ್ಷರಾದ ಎಸ್ಎನ್ಆರ್ ಆಲ್ವಿನ್ ಮಿನೇಜಸ್, ರೋಟರಿ ಸಮುದಾಯದಳ ಇನ್ನಂಜೆ ಅಧ್ಯಕ್ಷರಾದ ಆರ್ ಸಿ ಸಿ ದಿವ್ಯೇಶ್ ಶೆಟ್ಟಿ, ಇನ್ನಂಜೆ ಯುವಕ ಮಂಡಲ ಅಧ್ಯಕ್ಷರಾದ ಉಮೇಶ್ ಆಚಾರ್ಯ, ಇನ್ನಂಜೆ ಯುವತಿ ಮಂಡಲ ಅಧ್ಯಕ್ಷೆ ಆಶಾ ನಾಯಕ್, ಇನ್ನಂಜೆ ಬಿಲ್ಲವ ಸಂಘದ ಅಧ್ಯಕ್ಷರಾದ ಸದಾಶಿವ ಪೂಜಾರಿ, ಶಂಕರಪುರ ರಿಕ್ಷಾ ಚಾಲಕರ ಮಾಲಕರ ಸಂಘದ ಅಧ್ಯಕ್ಷರಾದ ರಮೇಶ್ ಕುಂದರ್, ಶಂಕರಪುರ ಟೆಂಪೋ ಚಾಲಕರ ಮಾಲಕರ ಸಂಘದ ಅಧ್ಯಕ್ಷರಾದ ಸಂಜೀವ ಮೂಲ್ಯ ಉಪಸ್ಥಿತರಿದ್ದರು.
ಸಂಜೆ ಜರಗಿದ ಸಮಾರೋಪ ಸಮಾರಂಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
