ಶಿರ್ವ : ಪಡುಕುತ್ಯಾರು ಆನೆಗುಂದಿ ಶ್ರೀ ಜನ್ಮವರ್ಧಂತಿ ಹಾಗೂ ವಿದ್ಯಾರ್ಥಿ ಭವನ ಉದ್ಘಾಟನಾ ಸಮಾರಂಭ
ಶಿರ್ವ : ಪಡುಕುತ್ಯಾರು ಆನೆಗುಂದಿ ಮಹಾಸಂಸ್ಥಾನ ಸರಸ್ವತಿ ಪೀಠದ ಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿ ಅವರ ಜನ್ಮವರ್ಧಂತಿ ಹಾಗೂ ವಿದ್ಯಾರ್ಥಿಭವನ ಉದ್ಘಾಟನಾ ಸಮಾರಂಭವು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಪಡುಕುತ್ಯಾರಿನ ಆನೆಗುಂದಿ ಮಠದಲ್ಲಿ ನಡೆಯಿತು.
ಪಡುಕುತ್ಯಾರಿನ ಆನೆಗುಂದಿ ಮಹಾಸಂಸ್ಥಾನದಲ್ಲಿ ನೂತನವಾಗಿ ನಿರ್ಮಿಸಲಾದ ನಾಗ ಧರ್ಮೇಂದ್ರ ಸರಸ್ವತಿ ವಿದ್ಯಾರ್ಥಿ ಭವನವನ್ನು ಕಾಪು ಕ್ಷೇತ್ರದ ಶಾಸಕ ಸುರೇಶ್ ಶೆಟ್ಟಿ ಗುರ್ಮೆ ಉದ್ಘಾಟಿಸಿ ಮಾತನಾಡಿ, ಕುತ್ಯಾರು ಗ್ರಾಮೀಣ ಪ್ರದೇಶದಲ್ಲಿ ವಿಶ್ವಕರ್ಮ ಸಮಾಜದ ಏಳಿಗೆಗಾಗಿ ಶ್ರಮಿಸುತ್ತಿರುವ ಆನೆಗುಂದಿ ಮಠವನ್ನು ಅಭಿವೃದ್ಧಿ ಪಥದತ್ತ ಮುನ್ನಡೆಸುವ ನಿಟ್ಟಿನಲ್ಲಿ ಸರಕಾರದ ಅನುದಾನ ಒದಗಿಸಲಾಗುವುದು. ಸರ್ವ ಜನಾಂಗಕ್ಕೆ ಒಳಿತು ಬಯಸುವ ಕಾಳಹಸ್ತೇಂದ್ರ ಸ್ವಾಮೀಜಿ ಸರ್ವರಸ್ವಾಮೀಜಿಯಾಗಿ ಮೂಡಿಬಂದಿದ್ದಾರೆ ಎಂದರು.
ಪಡುಕುತ್ಯಾರು ಆನೆಗುಂದಿ ಮಹಾಸಂಸ್ಥಾನ ಸರಸ್ವತಿ ಪೀಠದ ಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿ ದೀಪ ಪ್ರಜ್ವಲನಗೊಳಿಸಿದರು. ಆನೆಗುಂದಿ ಪ್ರತಿಷ್ಠಾನದ ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿ ಅಧ್ಯಕ್ಷ ವಿ. ಶ್ರೀಧರ ಅಚಾರ್ಯ ವಡೇರಹೋಬಳಿ ಅಧ್ಯಕ್ಷತೆ, ವಹಿಸಿದ್ದರು. ಸಮಾರಂಭದಲ್ಲಿ ಶಾಸಕ ಸುರೇಶ್ ಶೆಟ್ಟಿ ಗುರ್ಮೆ, ಕೋಟ ಶ್ರೀ ಅಮೃತೇಶ್ವರಿ ದೇವಸ್ಥಾನ ಧರ್ಮದರ್ಶಿ ವಡೇರ ಆನಂದ, ಸಮಾಜ ಸೇವಕರಾದ ಮಿಥುನ್ ಎಂ ರೈ, ಕ್ಯಾ| ಬ್ರಿಜೇಶ್ ಚೌಟ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಆಸ್ಥಾನ ವಿದ್ವಾನ್ ಪದವಿ ಪ್ರದಾನ : ಆನೆಗುಂದಿ ಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿ ಜನ್ಮವರ್ಧಂತಿ ಉತ್ಸವದ ಧರ್ಮ ಪ್ರಯುಕ್ತ ಸಂಸತ್ತಿನಲ್ಲಿ ಮಹಾಸಂಸ್ಥಾನದ ವಿದ್ವಾನ್ ಮಂಡಳಿಗೆ ವೈದಿಕ, ಗುರು ಪರಂಪರೆಗೆ ಅನುಪಮ ಸೇವೆ ಸಲ್ಲಿಸುತ್ತಿರುವ ಶಂಕರಾಚಾರ್ಯ ಕಡ್ಡಾಸ್ಕರ್ ಪಂಡಿತ್ ಹುಬ್ಬಳ್ಳಿ ಅವರಿಗೆ ಆಸ್ಥಾನ ವಿದ್ವಾನ್ ಪದವಿ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮಿ ಪ್ರಧಾನ ಮಾಡಿದರು.
ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿ ಅಧ್ಯಕ್ಷ ವಿ.ಶ್ರೀಧರ ಆಚಾರ್ಯ ಹೋಬಳಿ ಅಧ್ಯಕ್ಷತೆ ವಹಿಸಿದ್ದರು.
ಸಂಚಾಲಕ ಸೂರ್ಯ ಆಚಾರ್ಯ ಹಳೆಯಂಗಡಿ, ಅನೆಗುಂದಿ ಸರಸ್ವತಿ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಮೋಹನ್ ಕುಮಾರ್ ಬೆಳ್ಳೂರು, ಸರಸ್ವತಿ ಗೋವು ಪರ್ಯಾವರಣ್ ಸಂರಕ್ಷಣಾ ಟ್ರಸ್ಟ್ ಅಧ್ಯಕ್ಷ ಸುಂದರ ಅಚಾರ್ಯ ಬೆಳುವಾಯಿ, ಆನೆಗುಂದಿ ಗುರುಸೇವಾ ಪರಿಷತ್ ಕೇಂದ್ರ ಸಮಿತಿ ಅಧ್ಯಕ್ಷ ಗಣೇಶ್ ಆಚಾರ್ಯ ಕೆಮ್ಮಣ್ಣು ಸರಸ್ವತಿ ಮಾತೃ ಮಂಡಳಿ ಅಧ್ಯಕ್ಷೆ ಸಂಧ್ಯಾ ಲಕ್ಷ್ಮಣ ಅಚಾರ್ಯ ಉಡುಪಿ, ಕುತ್ಯಾರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲತಾ ಎಸ್ ಕುತ್ಯಾರು, ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿ ಗೌರವಾಧ್ಯಕ್ಷ ಪಿ.ವಿ.ಗಂಗಾಧರ ಆಚಾರ್ಯ ಉಡುಪಿ, ನಾಗ ಧರ್ಮೇಂದ್ರ ಸರಸ್ವತಿ ಸಂಸ್ಕೃತ ವೇದ ಸಂಜೀವಿನಿ ಪಾಠಶಾಲೆಯ ಆಸ್ಥಾನ ವಿದ್ವಾಂಸರುಗಳಾದ ಪಂಜ ಭಾಸ್ಕರ್ ಭಟ್, ಬಾಲಚಂದ್ರ ಭಟ್, ಚಂದು ಕೂಡ್ಲು, ಜ್ಯೋತಿಷ್ಯ ವಿದ್ವಾನ್ ಉಮೇಶ್ ಆಚಾರ್ಯ ಪಡೀಲು, ಹರಿಶ್ಚಂದ್ರ ಎನ್. ಆಚಾರ್ಯ, ಕಾಳಿಕಾಂಬಾ ವಿಶ್ವಕರ್ಮ ದೇವಾಲಯಗಳ ಪ್ರಧಾನ ಧರ್ಮದರ್ಶಿಗಳು ಉಪಸ್ಥಿತರಿದ್ದರು.
ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಂ.ಬಿ ಆಚಾರ್ ಕಂಬಾರ್ ಸ್ವಾಗತಿಸಿದರು. ಗೀತಾ ಚಂದ್ರ ಕಾರ್ಕಳ, ಗಂಗಾಧರ ಕೊಂಡೆವೂರು, ಸುರೇಶ್ ಆಚಾರ್ಯ ನಿರೂಪಿಸಿದರು. ಅರವಿಂದ ವೈ ಆಚಾರ್ಯ ವಂದಿಸಿದರು.
