ಉಚ್ಚಿಲ : ಮಾತಾ ಅಮೃತಾನಂದಮಯಿ ಮಠದ ವತಿಯಿಂದ ಗುರು ಪೂರ್ಣಿಮಾ ಆಚರಣೆ
Thumbnail
ಉಚ್ಚಿಲ : ನಮ್ಮೊಳಗಿನ ನಮ್ಮನ್ನು ಅರಿತುಕೊಳ್ಳಲು, ಲೌಕಿಕ ಸಮಸ್ಯೆಗಳನ್ನು ನಿವಾರಿಸಲು ಆಧ್ಯಾತ್ಮವು ಸಕಾರಾತ್ಮಕ ದಾರಿಯಾಗಿದ್ದು, ನಾವೆಲ್ಲರೂ ಆಧ್ಯಾತ್ಮದ ಕಡೆಗೆ ಮನಸ್ಸನ್ನು ಕೇಂದ್ರೀಕರಿಸಬೇಕು ಎಂದು ಮಂಗಳೂರಿನ ಮಾತಾ ಅಮೃತಾನಂದಮಯಿ ಮಠಾಧಿಪತಿ ಸಂಪೂಜ್ಯ ಸ್ವಾಮಿನಿ ಮಂಗಳಾಮೃತ ಪ್ರಾಣ ಹೇಳಿದರು. ದ.ಕ, ಉಡುಪಿ ಮತ್ತು ಉ.ಕ ವ್ಯಾಪ್ತಿಯ ಮಾತಾ ಅಮೃತಾನಂದಮಯಿ ಸೇವಾ ಸಮಿತಿ ವತಿಯಿಂದ ಉಚ್ಚಿಲ ಮಹಾಲಕ್ಷ್ಮೀ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಗುರು ಪೂರ್ಣಿಮಾ ಆಚರಣೆಯ ನೇತೃತ್ವ ವಹಿಸಿ ಅವರು ಆಶೀರ್ವಚನ ನೀಡಿದರು. ಗ್ರಹಚಾರಾಧಿ ಸಂಕಷ್ಟ ನಿವಾರಣೆ, ಸಾಮಾಜಿಕ ಒಳಿತು ಹಾಗೂ ಆಧ್ಯಾತ್ಮಿಕ ಜಾಗೃತಿಗಾಗಿ ಮಹಾ ಮೃತ್ಯುಂಜಯ ಹೋಮ, ಸರ್ವೈಷ್ವರ್ಯ ಸೌಭಾಗ್ಯ ಪೂಜೆ, ಗುರು ಪೂಜೆ, ಸರ್ವ ಮಂಗಳ ಪೂಜೆ ಏಕ ಕಾಲದಲ್ಲಿ ನೆರವೇರಿದ್ದು ಸಾವಿರಾರು ಭಕ್ತರು ಪೂಜೆಯಲ್ಲಿ ಭಾಗವಹಿಸಿದರು. ಇದೇ ಸಂದರ್ಭ ಪರಿಸರ ಜಾಗೃತಿ ಮತ್ತು ಸಹಭಾಗಿತ್ವದ ನೆಲೆಯಲ್ಲಿ ಸುಮಾರು 2 ಸಾವಿರ ಸಸಿಗಳನ್ನು ವಿತರಿಸಲಾಯಿತು. ಮಂಗಳೂರಿನ ಅಮೃತಾ ವಿದ್ಯಾಲಯಂ ನ ವಿದ್ಯಾರ್ಥಿಗಳು ಸಾಮೂಹಿಕ ಮಂತ್ರ ಪಠಣೆ ಮಾಡಿದರು. 25 ವರುಷಗಳ ಕಾಲ ಆಧ್ಯಾತ್ಮಿಕವಾಗಿ ನಿಸ್ವಾರ್ಥ ಸೇವೆ ಮಾಡಿದ 35 ಹಿರಿಯ ಭಕ್ತರಿಗೆ ಮಠದ ವತಿಯಿಂದ ಗೌರವಿಸಿ ಪ್ರಸಾದ ನೀಡಲಾಯಿತು. ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ, ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಕೋಟ್ಯಾನ್, ಆನಂದ್ ಸಿ. ಕುಂದರ್, ಉಡುಪಿ ಶಾಸಕ ಯಶಪಾಲ್ ಸುವರ್ಣ, ಮಾಜಿ ಸಚಿವ ಪ್ರಮೋದ್ ಮದ್ವರಾಜ್, ಪ್ರಸಾದ್ ರಾಜ್ ಕಾಂಚನ್, ಭರತ್ ಏರ್ಮಾಳ್, ಮಂಗಳೂರು ಅಧ್ಯಕ್ಷ ಡಾ ವಸಂತ್ ಕುಮಾರ್ ಪೆರ್ಲ, ಸುರೇಶ್ ಅಮೀನ್, ಕುಂದಾಪುರ ಅಧ್ಯಕ್ಷ, ಸುರೇಶ್ ಬೆತ್ತಿನ್, ಉಡುಪಿ ಅಧ್ಯಕ್ಷ ಯೋಗೀಶ್ ಬೈಂದೂರು, ಸುಬ್ರಹ್ಮಣ್ಯ ಅಧ್ಯಕ್ಷ ಚಂದ್ರಶೇಖರ್ ನಾಯರ್, ಮೂಲ್ಕಿ ಅಧ್ಯಕ್ಷ ವೈ.ಎನ್ ಸಾಲ್ಯಾನ್, ಕಾರವಾರ ಪ್ರತಿನಿಧಿಗಳು ಮತ್ತಿತರರು ಉಪಸ್ಥಿತರಿದ್ದರು. ಡಾ. ಅಶೋಕ್ ಶೆಣೈ ಕಾರ್ಯಕ್ರಮ ನಿರ್ವಹಿಸಿದರು.
Additional image
16 Jul 2023, 07:56 PM
Category: Kaup
Tags: