ಪಡುಬಿದ್ರಿ : ಆಟಿ ಅಮಾವಾಸ್ಯೆಯ ಕಷಾಯ ವಿತರಣೆ
Thumbnail
ಪಡುಬಿದ್ರಿ : ಇಲ್ಲಿನ‌ ಸಾಯಿ ಆರ್ಕೇಡ್ ನಲ್ಲಿ ಸಾರ್ವಜನಿಕರಿಗೆ ಆಟಿ ಅಮಾವಾಸ್ಯೆಯ ಕಷಾಯ ವಿತರಿಸಲಾಯಿತು. ಈ‌ ಸಂದರ್ಭ ಮಾತನಾಡಿದ ಹಿರಿಯ ತುಳು ಜಾನಪದ ವಿದ್ವಾಂಸರಾದ ಸದಾನಂದ ಪಿ.ಕೆ, ಆಷಾಢ ಮಾಸದ (ಆಟಿ ಅಮಾವಾಸ್ಯೆ) ಹಾಲೆ ಮರದ ಕೆತ್ತೆಯನ್ನು ನಡುರಾತ್ರಿ ವಿವಸ್ತ್ರವಾಗಿ ಹೋಗಿ ಕಲ್ಲಿನಿಂದ ಕೆತ್ತಿ ತಂದು ಮೇಲಿನ ತೊಗಟೆಯನ್ನು ತೆಗದು , ಗುದ್ದಿ ರಸ ತೆಗದು ಆ ಮೇಲೆ ಬೆಳ್ಳುಳ್ಳಿ , ಕರಿ ಮೆಣಸು ಮತ್ತು ಓಮವನ್ನು ಸೇರಿಸಿ ಅದನ್ನು ಸರಿಯಾದ ರೀತಿಯಲ್ಲಿ ಹುರಿದು, ಕಷಾಯ ದಲ್ಲಿರುವ ಶೀತದ ಅಂಶವನ್ನು ತೆಗೆಯುವ ಉದ್ದೇಶ ದಿಂದ ಕಾಯಿಸಿದ ‌ಬಿಳಿ ಬೋರ್ಗಲ್ಲನ್ನು ಕಷಾಯಕ್ಕೆ ಹಾಕಿ ನಂತರ ತೆಗೆದು ತಯಾರಿಸುವ ಕಷಾಯವೇ ಆಟಿ ಅಮಾವಾಸ್ಯೆ ಕಷಾಯ ಆಗಿದೆ ಎಂದರು. ಈ ಸಂದರ್ಭದಲ್ಲಿ ಗಾ.ಪಂ. ಅಧ್ಯಕ್ಷ ರವಿ ಶೆಟ್ಟಿ, ಸದಸ್ಯೆ ವಿದ್ಯಾಶ್ರೀ , ಹೆಜಮಾಡಿ ಗ್ರಾ.ಪಂ.ಮಾಜಿ ಅಧ್ಯಕ್ಷ ಪ್ರಾಣೇಶ್ ಹೆಜಮಾಡಿ, ಪಡುಬಿದ್ರಿ ರೋಟರಿ ನಿಯೋಜಿತ ಅಧ್ಯಕ್ಷ ಸಂತೋಷ್ ಪಡುಬಿದ್ರಿ, ಹಿತೇಶ್ ಪಡುಬಿದ್ರಿ, ಶೀಲಾ ಪಡುಬಿದ್ರಿ ಉಪಸ್ಥಿತರಿದ್ದರು.
Additional image
17 Jul 2023, 05:44 PM
Category: Kaup
Tags: