ಕಾಪು : ಎಲ್ಲೂರಿನ ಶ್ರೀ ಪಾಂಡುರಂಗ ಭಜನಾ ಮಂಡಳಿಯಲ್ಲಿ ವಾರ್ಷಿಕ ಭಜನಾ ಮಂಗಳೋತ್ಸವ
Thumbnail
ಕಾಪು : ಎಲ್ಲೂರು ಗ್ರಾಮದ ಶ್ರೀ ಪಾಂಡುರಂಗ ಭಜನಾ ಮಂಡಳಿಯಲ್ಲಿ ವಾರ್ಷಿಕ ಭಜನಾ ಮಂಗಳೋತ್ಸವ ವಿಜೃಂಭಣೆಯಿ‌ಂದ ನೆರವೇರಿತು. ಶನಿವಾರ ಮುಂಜಾನೆ ಸೂರ್ಯೋದಯದ ಕಾಲ 6 ಗಂಟೆಗೆ ದೀಪ ಪ್ರಜ್ವಲನೆಯ ಮೂಲಕ ಆರಂಭಗೊಂಡ ಭಜನೆ ಮರುದಿನ ಭಾನುವಾರ 6:10 ನಿಮಿಷಕ್ಕೆ ಸಂಪನ್ನಗೊಂಡಿತು. ಭಜನಾ ಸೇವೆಯಲ್ಲಿ ಜಿಲ್ಲೆಯ 22 ಭಜನಾ ತಂಡಗಳು ಪಾಲ್ಗೊಂಡಿದ್ದವು. ಜಾನಪದ ವಿದ್ವಾಂಸ ಕೆ ಎಲ್ ಕುಂಡಂತಾಯರು ,ಮಂಡಳಿಯ ಅಧ್ಯಕ್ಷ ಚಂದ್ರಶೇಖರ್ ಶೆಟ್ಟಿಗಾರ್, ಕೆ.ಲಕ್ಷ್ಮೀನಾರಾಯಣ ರಾವ್ ದಂಪತಿಗಳು, ನಿವೃತ್ತ ಪ್ರಾಚಾರ್ಯ ನಾಗರತ್ನ ರಾವ್ ದಂಪತಿಗಳು, ಕಮಲಾವತಿ ಉಡುಪಿ, ಸತೀಶ್ ಕುತ್ಯಾರ್, ಪ್ರೀತಿ ಸಂತೋಷ್ ಭಂಡಾರಿ ಕಟಪಾಡಿ, ಅರುಣ್ ಶೆಟ್ಟಿ ಕುತ್ಯಾರು, ಶ್ರೀನಿವಾಸ್ ಭಾಗವತರು, ಅರ್ಚಕ ಗುರುರಾಜ್ ರಾವ್, ವಿಎ ಸುನೀಲ್ ದೇವಾಡಿಗ ಮತ್ತಿತರ ಗಣ್ಯರು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅಹೋರಾತ್ರಿ ನಡೆದ ಭಜನೆ, ಅನ್ನಸಂತರ್ಪಣೆ, ಮಾತೃ ಮಂಡಳಿಯ ಸುಮಾರು ನೂರಕ್ಕೂ ಹೆಚ್ಚು ಸದಸ್ಯರ ಕುಣಿತ ಭಜನೆಯೊಂದಿಗೆ ಸಮಾಪನೆಗೊಂಡು ತರುವಾಯ ಓಕುಳಿ ಸೇವೆ , ಅವಭೃತ ಸ್ನಾನ ಮಹಾಪೂಜೆಯೊಂದಿಗೆ ಸಂಪನ್ನಗೊಂಡಿತು.
Additional image Additional image Additional image
19 Jul 2023, 05:52 PM
Category: Kaup
Tags: