ಜುಲೈ 22 : ಪಡುಕುತ್ಯಾರು ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠದಲ್ಲಿ ಶ್ರೀ ಪುರುಷೋತ್ತಮ ಯಾಗ
ಕಾಪು : ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ, ಕಟಪಾಡಿ
ಪಡುಕುತ್ಯಾರು ಇಲ್ಲಿನ ಜಗದ್ಗುರು ಅನಂತಶ್ರೀವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರ ಶೋಭಕೃತ್ ನಾಮ ಸಂವತ್ಸರದ 19ನೇ ವರ್ಷದ ಚಾತುರ್ಮಾಸ್ಯ ವ್ರತಾಚರಣೆ-2023 ಜುಲೈ 3ರಿಂದ ಸೆಪ್ಟಂಬರ್ 29 ತನಕ ಶ್ರೀ ಸರಸ್ವತೀ ಸತ್ಸಂಗ ಮಂದಿರ, ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ, ಪಡುಕುತ್ಯಾರು ಇಲ್ಲಿ ಜರಗುತ್ತಿದೆ.
ಈ ನಿಮಿತ್ತ ವಿಶ್ವ ಬ್ರಾಹ್ಮಣ ಪ್ರತಿಷ್ಠಾನ ಹುಬ್ಬಳ್ಳಿ ಇವರ ವತಿಯಿಂದ ಆನೆಗುಂದಿ ಮಹಾಸಂಸ್ಥಾನದ ಆಸ್ಥಾನ ವಿದ್ವಾಂಸರಾದ ವೇ.ಬ್ರ. ಶ್ರೀ ಶಂಕರಾಚಾರ್ಯಗುರುನಾಥ ಆಚಾರ್ಯ ಪಂಡಿತ್ ಕಡ್ಲಾಸ್ಕರ್ ಅವರ ನೇತೃತ್ವದೊಂದಿಗೆ, ಪಡುಕುತ್ಯಾರಿನಲ್ಲಿ ಸ್ವಸ್ತಿ ವಿಜಯಾಭ್ಯುದಯ ಶಾಲಿವಾಹನಶಕ 1946, ಜುಲೈ 22, ಶನಿವಾರದಂದು ಪೂರ್ವಾಹ್ನ ಘಂಟೆ 7 ರಿಂದ ಶೊಭಕೃತ್ ಸಂವತ್ಸರದ ಅಧಿಕ ಮಾಸದ ಅಧಿಕ ಶ್ರಾವಣ ಶುಕ್ಲ ಪಕ್ಷ ಚತುರ್ಥಿ, ಶನಿವಾರದಂದು
ಶ್ರೀ ಪುರುಷೋತ್ತಮ ಯಾಗವನ್ನು ನಡೆಸಲು ತೀರ್ಮಾನಿಸಲಾಗಿದೆ.
ಪುರುಷೋತ್ತಮ ಮಾಸದ ನಿಮಿತ್ತವಾಗಿ ಮಾಡುವ ವ್ರತನಿಯಮ, ಪೂಜಾನುಷ್ಠಾನ,ಯಾಗ ಧರ್ಮಗಳಿಗೆ ಪುರುಷೋತ್ತಮ ಸ್ವರೂಪಿಯಾಗಿರುವ ಯತಿಗಳ ಸಾನಿಧ್ಯದಲ್ಲಿ ಸಂಪನ್ನಗೊಳ್ಳುವ ಸೇವೆಗಳಿಗೆ ವಿಶೇಷ ಮತ್ತು ಅಧಿಕ ಫಲಗಳು ಇವೆ. ಪುರುಷೋತ್ತಮ ಯಾಗವು
108 ದಂಪತಿ ಪೂಜೆ, ವಾಯನ ದಾನ, ಅಪೂಪಾದಿ ದಾನ ಇವುಗಳೊಂದಿಗೆ
ಕಾರ್ಯಕ್ರಮಗಳು ಮಹಾ ಸನ್ನಿಧಾನಂಗಳವರ ದಿವ್ಯ ಸನ್ನಿಧಿಯಲ್ಲಿ ಸಂಪನ್ನಗೊಳ್ಳಲಿದೆ.
ಗೌರವಾಧ್ಯಕ್ಷರಾದ ಪಿ.ವಿ ಗಂಗಾಧರ ಆಚಾರ್ಯ, ಉಡುಪಿ, ಅಧ್ಯಕ್ಷರಾದ ವಿ.ಶ್ರೀಧರ ಆಚಾರ್ಯ ವಡೇರಹೋಬಳಿ, ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಂ.ಬಿ ಆಚಾರ್, ಕೋಶಾಧಿಕಾರಿ
ಅರವಿಂದ ವೈ. ಆಚಾರ್ಯ ಬೆಳುವಾಯಿ,
ಪದಾಧಿಕಾರಿಗಳು ಹಾಗೂ ಸದಸ್ಯರು
ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿ ಹಾಗೂ ಶ್ರೀಮತ್ ಆನೆಗುಂದಿ ಜಗದ್ಗುರು ಮಹಾಸಂಸ್ಥಾನ ಸರಸ್ವತೀ ಪೀಠ ಪ್ರತಿಷ್ಠಾನ(ರಿ)
ಕಟಪಾಡಿ ಪಡುಕುತ್ಯಾರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
