ಕಾರ್ಕಳ : ಕರಾಟೆಯಲ್ಲಿ ನಿಟ್ಟೆಯ ಅನುಷ್ ಮತ್ತು ಆಯುಷ್ ಸಾಧನೆ
Thumbnail
ಕಾರ್ಕಳ : ರಾಷ್ಟ್ರೀಯ ಮಟ್ಟದ ಮುಕ್ತ ಕರಾಟೆ ಪಂದ್ಯಾಟದಲ್ಲಿ ನಿಟ್ಟೆಯ ಅನುಷ್ ಅರುಣ್ ಕುಮಾರ್, ಆಯುಷ್ ಅರುಣ್ ಕುಮಾರ್ ಸಾಧನೆಗೈದಿದ್ದಾರೆ. ಅನುಷ್ ಬ್ರೌನ್ ಬೆಲ್ಟ್ ವಿಭಾಗದಲ್ಲಿ ಕುಮಿಟೆಯಲ್ಲಿ ಪ್ರಥಮ ಸ್ಥಾನ ಹಾಗೂ ಕಟದಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಹಾಗೂ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಆಯುಷ್ ಬ್ರೌನ್ ಬೆಲ್ಟ್ ವಿಭಾಗದಲ್ಲಿ ಕುಮಿಟೆಯಲ್ಲಿ ಧ್ವಿತೀಯ ಸ್ಥಾನ ಹಾಗೂ ಕಟದಲ್ಲಿ ತೃತೀಯ ಸ್ಥಾನ ಪಡೆದು ಬೆಳ್ಳಿಯ ಪದಕ ಹಾಗೂ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಉಡುಪಿಯ ಶ್ರೀ ಕೃಷ್ಣ ಮಂದಿರರ ರಾಜಾಂಗಣದಲ್ಲಿ ಜುಲೈ 15, 16ರಂದು ಎರಡು ದಿನಗಳ ಕಾಲ ನಡೆದ ಮೊದಲ ಆವೃತ್ತಿಯ ರಾಷ್ಟ್ರೀಯ ಮಟ್ಟದ ಮುಕ್ತ ಕರಾಟೆ ಪಂದ್ಯಾಟ ಚಾಂಪಿಯನ್ ಶಿಪ್ ನಲ್ಲಿ ಅವರು ಈ ಸಾಧನೆಗೈದಿದ್ದಾರೆ.
20 Jul 2023, 05:25 PM
Category: Kaup
Tags: