ಪಡುಬಿದ್ರಿ : ಅಪಾಯಕ್ಕೆ ಸಿಲುಕಿದ್ದ ಅಪರೂಪದ ಹಾಕ್ಸ್ ಬಿಲ್ ಸೇರಿದಂತೆ ಒಟ್ಟು 6 ಕಡಲಾಮೆಗಳ ರಕ್ಷಣೆ
Thumbnail
ಪಡುಬಿದ್ರಿ : ಬಲೆಗೆ ಸಿಲುಕಿ ಒದ್ದಾಡುತ್ತಾ ಸಮುದ್ರ ತೀರಕ್ಕೆ ಬಂದಿದ್ದ ಹಾಕ್ಸ್ ಬಿಲ್ ಸೇರಿದಂತೆ ಒಟ್ಟು 6 ಕಡಲಾಮೆಗಳನ್ನು ಪಡುಬಿದ್ರಿ ಬ್ಲೂ ಫ್ಲ್ಯಾಗ್ ಸಿಬ್ಬಂದಿ ರಕ್ಷಿಸಿ ಮರಳಿ ಸಮುದ್ರಕ್ಕೆ ಬಿಟ್ಟಿದ್ದಾರೆ. ಕಡಲಬ್ಬರವಿದ್ದರೂ ಸಮುದ್ರಕ್ಕೆ ಇಳಿದ ಬ್ಲೂಫ್ಲ್ಯಾಗ್ ಬೀಚ್‌ನ ಮೇಲ್ವಿಚಾರಕ ಕಿರಣ್‌ರಾಜ್ ಮತ್ತವರ ತಂಡ ಬಲೆಯಲ್ಲಿ ಸಿಲುಕಿದ್ದ ಕಡಲಾಮೆಯನ್ನು ಸಮುದ್ರದ ಮೇಲಕ್ಕೆ ತಂದು ರಕ್ಷಿಸಿದ್ದಾರೆ. ರಕ್ಷಣಾ ತಂಡದಲ್ಲಿ ಸ್ಥಳೀಯರಾದ ದಿನರಾಜ್ ಕುಂದರ್, ಹೇಮರಾಜ್ ಕುಂದರ್, ಕಾರ್ತಿಕ್, ಬೀಚ್ ಸಿಬ್ಬಂದಿ ಸತ್ಯವತಿ, ಸುಮನ್, ಯತೀಶ್ ಮತ್ತಿತರರಿದ್ದರು.
Additional image
22 Jul 2023, 06:22 PM
Category: Kaup
Tags: