ಪಡುಬಿದ್ರಿ : ಕಡಲ್ಕೊರೆತದ ಭೀತಿಯಲ್ಲಿ ಎಂಡ್ ಪಾಯಿಂಟ್ ನಲ್ಲಿರುವ ಬ್ಲೂ ಫ್ಲ್ಯಾಗ್ ಬೀಚ್
ಪಡುಬಿದ್ರಿ : ಅಂತರಾಷ್ಟ್ರೀಯ ಮಾನ್ಯತೆ ಪಡೆದ ಪಡುಬಿದ್ರಿಯ ಎಂಡ್ ಪಾಯಿಂಟ್ ನಲ್ಲಿರುವ ಬ್ಲೂ ಫ್ಲ್ಯಾಗ್ ಬೀಚ್ ಕಡಲ್ಕೊರೆತದ
ಭೀತಿಯಲ್ಲಿದೆ. ಈ ನಿಟ್ಟಿನಲ್ಲಿ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ.
ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಪಡುಬಿದ್ರಿ ಬ್ಲೂ ಫ್ಲ್ಯಾಗ್ ಬೀಚ್ ಪ್ರಬಂಧಕ ವಿಜಯ ಶೆಟ್ಟಿ, ಎರಡು ದಿನಗಳಿಂದ ಕಡಲ್ಕೊರೆತ ಜಾಸ್ತಿ ಇರುವುದರಿಂದ ಪ್ರವಾಸಿಗರಿಗೆ ಸಮುದ್ರ ದಡಕ್ಕೆ ಹೋಗಲು ನಿಬಂ೯ಧ ವಿಧಿಸಿದ್ದೆವು. ಒಳಗಿನ ಗಾರ್ಡನ್ ಏರಿಯಾಕ್ಕೆ ಬರಲು ಅವಕಾಶವಿತ್ತು. ಮುಂಜಾಗ್ರತಾ ಕ್ರಮವಾಗಿ ಭಾನುವಾರ 3 ಗಂಟೆಯಿಂದ ಪ್ರವಾಸಿಗರಿಗೆ ನಿಬಂ೯ಧಿಸಲಾಗಿದೆ.
ಜೋರಾದ ಕಡಲ ಅಲೆಗಳಿಗೆ ರಕ್ಷಣೆಗಾಗಿ ಕಟ್ಟಿದ ಕಲ್ಲಿನ ಕಟ್ಟೆ ಕೊಚ್ಚಿಕೊಂಡು ಹೋಗಿದ್ದು, ವಾಚ್ ಟವರ್ ಕುಸಿಯುವ ಭೀತಿಯಲ್ಲಿದೆ. ಇದರಿಂದ ಸ್ವಲ್ಪ ಮಟ್ಟಿನ ನಷ್ಟವಾಗಿದೆ ಎಂದರು.
ಅಂತರಾಷ್ಟ್ರೀಯ ಮಾನ್ಯತೆ ಪಡೆದ ದೇಶದ ಹನ್ನೆರಡು ಬೀಚ್ ಗಳಲ್ಲಿ ಇದೂ ಒಂದಾಗಿದ್ದು, ಕಾಮಿನಿ ನದಿ ಮತ್ತು ಸಮುದ್ರದ ನಡುವೆ ಇರುವ ಈ ಪ್ರದೇಶ ಪ್ರವಾಸಿಗರ ಆಕರ್ಷಣೀಯ ತಾಣವಾಗಿದೆ.
