ಕಾಪು ವಲಯದ ಎಸ್ ಕೆ ಪಿ ಎ ಅಧ್ಯಕ್ಷರಾಗಿ ಸಚಿನ್‌ ಉಚ್ಚಿಲ ಅವಿರೋಧ ಆಯ್ಕೆ
Thumbnail
ಕಾಪು : ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಶನ್ ದಕ್ಷಿಣ ಕನ್ನಡ ಉಡುಪಿ ಜಿಲ್ಲೆ ಇದರ ಕಾಪು ವಲಯದ ಅಧ್ಯಕ್ಷರಾಗಿ ಸಚಿನ್‌ ಉಚ್ಚಿಲ ಅವಿರೋಧ ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ರಾಘವೇಂದ್ರ ಭಟ್, ಕೋಶಾಧಿಕಾರಿಯಾಗಿ ರವಿರಾಜ್ ಶೆಟ್ಟಿ, ಗೌರವಾಧ್ಯಕ್ಷರಾಗಿ ಕರುಣಾಕರ ನಾಯಕ್‌, ಉಪಾಧ್ಯಕ್ಷರಾಗಿ ಸಂತೋಷ್ ಕಾಪು ಮತ್ತು ಸತೀಶ್ ಎರ್ಮಾಳು, ಕ್ರೀಡಾ ಕಾರ್ಯದರ್ಶಿಯಾಗಿ ವಿಕ್ರಮ್ ಭಟ್, ಜೊತೆ ಕಾರ್ಯದರ್ಶಿಯಾಗಿ ದೀಪಕ್ ಶೆಣೈ, ಸಂಘಟನಾ ಕಾರ್ಯದರ್ಶಿಯಾಗಿ ಪ್ರವೀಣ್ ಕಾಪು, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಉದಯ್ ಇನ್ನ, ಅರುಳ್ ಡಿಸೋಜಾ ಛಾಯಾ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ. ಹಾಗೆಯೇ ಜಿಲ್ಲಾ ಸಮಿತಿ ಸದಸ್ಯರಾಗಿ ರವಿಕುಮಾರ್ ಕಟಪಾಡಿ, ಕೃಷ್ಣ ರಾವ್, ಶ್ರೀನಿವಾಸ ಐತಾಳ್, ವೀರೇಂದ್ರ ಶಿರ್ವ, ಉದಯ್ ಮುಂಡ್ಕೂರು. ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ರವಿರಾಜ್ ರಾವ್, ಅಶೋಕ್ ಸುಭಾಸ್ ನಗರ ಆಯ್ಕೆಯಾಗಿದ್ದಾರೆ.
01 Aug 2023, 08:29 PM
Category: Kaup
Tags: