ಅದಮಾರು : ನೇಮನಿಷ್ಠೆಯ ಹಬ್ಬಗಳು ಪುಸ್ತಕ ಬಿಡುಗಡೆ
Thumbnail
ಅದಮಾರು : ನಮ್ಮ ಹಬ್ಬಗಳ ಆಚರಣೆಯಲ್ಲಿ ಸಂಸ್ಕೃತಿಯ ಅನಾವರಣ ಇದೆ.ಇಂತಹ ಹಬ್ಬಗಳು ಸನ್ನಿಹಿತವಾಗುವ ವೇಳೆ ಮನೆಯ ಹಿರಿಯರು ಆಚರಣೆ ವಿಧಾನ ಹಾಗೂ ಅವುಗಳ ಮಹತ್ವವನ್ನು ಮನೆಯ ಮಕ್ಕಳಿಗೆ ವಿವರಿಸಬೇಕಾದ ಅಗತ್ಯವಿದೆ ಎಂದು ನಿವೃತ್ತ ಪಾಂಶುಪಾಲ ಬಿ.ಆರ್.ನಾಗರತ್ನ ಅವರು ಅಭಿಪ್ರಾಯಪಟ್ಟರು. ಅವರು ಅದಮಾರಿನ ಸುದರ್ಶನ ನಿಲಯದಲ್ಲಿ ಕೆ.ಎಲ್.ಕುಂಡಂತಾಯರ 'ನೇಮನಿಷ್ಠೆಯ ಹಬ್ಬಗಳು' ಪುಸ್ತಕ ಬಿಡುಗಡೆಗೊಳಿಸಿ ಮಾತನಾಡುತ್ತಿದ್ದರು. ತೊಂಬತ್ತಾರರ ಹರೆಯದ ನಿವೃತ್ತ ಶಿಕ್ಷಕ,ಶಿಕ್ಷಣ ಪ್ರೇಮಿ ವೈ.ಎಂ.ಶ್ರೀಧರ ರಾವ್ , ಪುಸ್ತಕದ ಪ್ರಕಾಶಕರಾದ ಕಿನ್ನಿಗೋಳಿಯ ಗಾಯತ್ರೀ ಪ್ರಕಾಶನ ಸಂಸ್ಥೆಯ ಸಚ್ಚಿದಾನಂದ ಉಡುಪ, ಗುರುರಾಜ ಮಂಜಿತ್ತಾಯ, ಉದ್ಯಮಿ‌ ಸತೀಶ ಕುಂಡಂತಾಯ, ನಿವೃತ್ತ ಪ್ರಾಂಶುಪಾಲ ಸುದರ್ಶನ ವೈ.ಎಸ್., ಅದಮಾರು ಯುವಕ ಸಂಘದ ಅಧ್ಯಕ್ಷ ಸಂತೋಷ ಜೆ.ಶೆಟ್ಟಿ ಉಪಸ್ಥಿತರಿದ್ದರು. ಕೆ.ಎಲ್.ಕುಂಡಂತಾಯ ಪ್ರಸ್ತಾವಿಸಿದರು, ಸುದರ್ಶನ ಅವರು ಸ್ವಾಗತಿಸಿ, ವಂದಿಸಿದರು.
02 Aug 2023, 12:56 PM
Category: Kaup
Tags: