ಕಾಪು ಲಯನ್ಸ್ ಕ್ಲಬ್ ಪದಗ್ರಹಣ
ಕಾಪು : ಇಲ್ಲಿನ ಲಯನ್ಸ್ ಕ್ಲಬ್ ಪದಗ್ರಹಣವು ಕಾಪುವಿನ K1 ನ ಶಾಂಭವಿ ಸಭಾಭವನದಲ್ಲಿ ಮಾಜಿ ಜಿಲ್ಲಾ ಗವರ್ನರ್ ಸುರೇಶ್ ಪ್ರಭುರವರ ನೇತೃತ್ವದಲ್ಲಿ ನಡೆಯಿತು.
ನೂತನ ಪದಾಧಿಕಾರಿಗಳಿಗೆ ಪದ ಪ್ರಧಾನಿಸಿ ಮಾತನಾಡಿದ ಅವರು ಸುಮಾರು 47 ವರ್ಷ ಇತಿಹಾಸವುಳ್ಳಂತಹ ಕಾಪು ಲಯನ್ಸ್ ಕ್ಲಬ್ ಅತ್ಯಂತ ಹಿರಿದಾದ ಕ್ಲಬ್ ಗಳಲ್ಲಿ ಒಂದಾಗಿದ್ದು ಸಂಘಟನೆಗಳು ಪ್ರಾಮಾಣಿಕ ಸತ್ಯ ನಿಷ್ಠೆ ಮತ್ತು ಸಮಾಜಮುಖಿ ಚಿಂತನೆಗಳನ್ನು ಅಳವಡಿಸಿಕೊಂಡಾಗ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ ಎಂದು ಕಾರ್ಯಕ್ರಮದಲ್ಲಿ ಹೇಳಿದರು.
ಕಾಪು ಲಯನ್ಸ್ ಕ್ಲಬ್ ನ ಅಧ್ಯಕ್ಷ ವರುಣ್ ಶೆಟ್ಟಿ ನೂತನ ಅಧ್ಯಕ್ಷರಾದ ಉದಯ ಆರ್ ಶೆಟ್ಟಿರವರಿಗೆ ಅಧಿಕಾರ ಹಸ್ತಾಂತರಿಸಿದರು. ಕಾರ್ಯದರ್ಶಿಯಾಗಿ ಕೆ.ಎಂ. ಲುತುಪುಲ್ಲ, ಕೋಶಾಧಿಕಾರಿಯಾಗಿ ನಡಿಕೆರೆ ರತ್ನಾಕರ್ ಶೆಟ್ಟಿ 2022-2023 ನೆ ಸಾಲಿನ ಪದಾಧಿಕಾರಿಗಳಾಗಿ ಅಧಿಕಾರ ವಹಿಸಿಕೊಂಡರು.
ಪ್ರಾಂತೀಯ ಅಧ್ಯಕ್ಷರಾದ ರಿಷಿಕೇಶ ಹೆಗಡೆ ಸ್ಥಳೀಯ ಶಾಲೆಗಳಿಗೆ ಸ್ಕೂಲ್ ಬ್ಯಾಗನ್ನು ವಿತರಿಸುವ ಸಲುವಾಗಿ ಚೆಕ್ ಅನ್ನು ವಲಯ ಅಧ್ಯಕ್ಷರಾದ ವರುಣ್ ಶೆಟ್ಟಿ ಅವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಕಾಪುವಿನ ಸ್ಥಳೀಯರಿಗೆ ಆಹಾರ ಸಾಮಗ್ರಿಯ ಕಿಟ್ ಅನ್ನು ನೂತನವಾಗಿ ಆಯ್ಕೆಯಾದ ವಲಯ ಅಧ್ಯಕ್ಷರಾದ ವರುಣ್ ಶೆಟ್ಟಿ ಅವರ ನೇತೃತ್ವದಲ್ಲಿ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಮಾಜಿ ಜಿಲ್ಲಾ ಗವರ್ನರ್ ಸುರೇಶ್ ಶೆಟ್ಟಿ ಉಪಸ್ಥಿತರಿದ್ದರು. ಮೆಂಬರ್ ಶಿಪ್ ಡೆವಲಪ್ಮೆಂಟ್ ಚೇರ್ಮನ್ ಹರೀಶ್ ನಾಯಕ್ ಕಾಪು ಕಾರ್ಯಕ್ರಮ ನಿರ್ವಹಿಸಿ ಕಾರ್ಯದರ್ಶಿ ಕೆ ಎಂ ಲುತ್ ಪುಲ್ಲ ವಂದಿಸಿದರು.
