ಪಡುಬಿದ್ರಿ ಬ್ರಹ್ಮಸ್ಥಾನ: ಅಜಕಾಯಿ ಸೇವೆ ಸಂಪನ್ನ
Thumbnail
ಪಡುಬಿದ್ರಿ: ಬೇಂಗ್ರೆ ಶಿವಳ್ಳಿ ಬ್ರಾಹ್ಮಣ ಹತ್ತು ಸಮಸ್ತರ ಆಡಳಿತ ಸಂಸ್ಥೆ ವನ ದುರ್ಗಾ ಟ್ರಸ್ಟ್‌ನ ಆಡಳಿತಕ್ಕೊಳಪಟ್ಟಿರುವ ಬಯಲು ಆಲಯವೆಂದೇ ಜಗತ್‌ಪ್ರಸಿದ್ದಿ ಪಡೆದ ಪಡುಬಿದ್ರಿಯ ಶ್ರೀ ಖಡೇಶ್ವರಿ ಬ್ರಹ್ಮಸ್ಥಾನದಲ್ಲಿ ಬುಧವಾರ ಸಹಸ್ರಾರು ಭಕ್ತರ ಪಾಲ್ಗೊಳ್ಳುವಿಕೆಯೊಂದಿಗೆ ಶ್ರದ್ಧಾ ಭಕ್ತಿಯ ಅಜಕಾಯಿ ಸೇವೆಯು ಸಂಪನ್ನಗೊಂಡಿತು. ಸುಮಾರು 15000 ಕ್ಕೂ ಮಿಕ್ಕಿ ತೆಂಗಿನಕಾಯಿಗಳು ಶ್ರೀ ಸನ್ನಿಧಾನಕ್ಕೆ ಸಮರ್ಪಿತವಾಯಿತು. ಅಜಕಾಯಿ ಸೇವೆಯ ಬಳಿಕ ಭಕ್ತರಿಗೆ ಅರ್ಪಿತ ತೆಂಗಿನ ಕಾಯಿಗಳನ್ನು ಪ್ರಸಾದದ ರೂಪದಲ್ಲಿ ವಿತರಿಸಲಾಯಿತು. ಪಾತ್ರಿ ಸುರೇಶ್ ರಾವ್, ಅರ್ಚಕ ವರ್ಗ, ಊರ ಪರವೂರ ಭಕ್ತಾದಿಗಳು ಉಪಸ್ಥಿತರಿದ್ದರು.
03 Aug 2023, 12:08 PM
Category: Kaup
Tags: