ಮಟ್ಟಾರು : ಹರ್ ಘರ್ ತಿರಂಗಾ ಅಭಿಯಾನ
ಮಟ್ಟಾರು : ಇಲ್ಲಿನ ಅಂಚೆ ಕಚೇರಿ ವತಿಯಿಂದ ಹರ್ ಘರ್ ತಿರಂಗಾ ಅಭಿಯಾನವು ನಡೆಯಿತು.
ಸಾಂಕೇತಿಕವಾಗಿ ಶಿರ್ವ ಗ್ರಾಮ ಪಂಚಾಯತ್ ಸದಸ್ಯರಾದ ದೇವದಾಸ ಪ್ರಭು ಇವರು ಧ್ವಜವನ್ನು ಹಸ್ತಾಂತರಿಸುವ ಮೂಲಕ ಚಾಲನೆ ನೀಡಿದರು.
ಸ್ಥಳೀಯ ಪಂಚಾಯತ್ ಸದಸ್ಯರಾದ ಸುರೇಶ ನಾಯ್ಕ, ಗೋಪಾಲ ನಾಯ್ಕ, ವಿಶ್ವಹಿಂದು ಪರಿಷತ್ ಪದಾಧಿಕಾರಿಗಳು, ಅಂಚೆ ಸಿಬ್ಬಂದಿಗಳು ಉಪಸ್ಥಿತರಿದ್ದರು. ದೇವದಾಸ ಪ್ರಭು ಇವರಿಂದ ಕೊಡುಗೆಯಾಗಿ ಸುಮಾರು 35 ಜನರಿಗೆ ರಾಷ್ಟ್ರ ಧ್ವಜವನ್ನು ನೀಡಲಾಯಿತು.
ಅಂಚೆ ಪಾಲಕ ದಿನೇಶ ಪಾಟ್ಕರ್ ಸ್ವಾಗತಿಸಿದರು, ಸಿಬ್ಬಂದಿ ಧೀರಜ್ ಸಹಕರಿಸಿದರು.
