ಬಂಟಕಲ್ಲು : ಫೆಲಿಕ್ಸ್ ಮಾರ್ಟಿಸ್ ಸ್ಮರಣಾರ್ಥ ರಿಕ್ಷಾ ನಿಲ್ದಾಣಕ್ಕೆ ಸೋಲಾರ್ ದೀಪದ ಕೊಡುಗೆ
Thumbnail
ಬಂಟಕಲ್ಲು : ಇಲ್ಲಿನ ಆಟೋ ರಿಕ್ಷಾ ಚಾಲಕರ ಹಾಗೂ ಮಾಲಕರ ಸಂಘ ಇದರ ರಿಕ್ಷಾ ನಿಲ್ದಾಣಕ್ಕೆ ಸುಮಾರು ರೂ. 25 ಸಾವಿರ ವೆಚ್ಚದಲ್ಲಿ ಫೆಲಿಕ್ಸ್ ಮಾರ್ಟಿಸ್ ಸ್ಮರಣಾರ್ಥ ತೆರೆಜಾ ಮಾರ್ಟಿಸ್ ಹಾಗೂ ಮಕ್ಕಳಿಂದ ಕೊಡುಗೆಯಾಗಿ ನೀಡಿದ ಸೋಲಾರ್ ದೀಪವನ್ನು ಜಯಪ್ರಕಾಶ್ ಮಾರ್ಟಿಸ್ ಉದ್ಘಾಟಿಸಿದರು. ಆಟೋರಿಕ್ಷಾ ಚಾಲಕರ ಹಾಗೂ ಮಾಲಕರ ಸಂಘ ಬಂಟಕಲ್ಲು ಅಧ್ಯಕ್ಷ ಮಂಜುನಾಥ ಪೂಜಾರಿ ಅಧ್ಯಕ್ಷತೆ ‌ವಹಿಸಿದ್ದರು. ಈ ಸಂದರ್ಭ ಆಟೋ ರಿಕ್ಷಾ ಚಾಲಕರ ಹಾಗೂ ಮಾಲಕರ ಸಂಘ ಬಂಟಕಲ್ಲು ಗೌರವಾಧ್ಯಕ್ಷ ಮಾಧವ ಕಾಮತ, ಉಪಾಧಕಾಮತ್, ಉಪಾಧ್ಯಕ್ಷರಾದ ಸತೀಶ್, ಕೋಶಾಧಿಕಾರಿ ಸುಧಾಕರ್, ಸದಸ್ಯರು ಹಾಜರಿದ್ದರು. ಡೆನಿಸ್ ಡಿಸೋಜಾ ಸ್ವಾಗತಿಸಿದರು. ಗೋಪಾಲ್ ದೇವಾಡಿಗ ವಂದಿಸಿದರು.
15 Aug 2023, 12:15 PM
Category: Kaup
Tags: