ಪಡುಬಿದ್ರಿ : ಸಹಕಾರಿ ವ್ಯವಸಾಯಿಕ ಸೊಸೈಟಿಯಲ್ಲಿ 77ನೇ ಸ್ವಾತಂತ್ರೋತ್ಸವ ಆಚರಣೆ ; ಸಂಸ್ಥೆಯ ಸಿಬ್ಬಂದಿಗೆ ತರಬೇತಿ ಶಿಬಿರ
Thumbnail
ಪಡುಬಿದ್ರಿ : ಇಲ್ಲಿನ ಸಹಕಾರಿ ವ್ಯವಸಾಯಿಕ ಸೊಸೈಟಿಯಲ್ಲಿ 77ನೇ ಸ್ವಾತಂತ್ರೋತ್ಸವದ ಆಚರಣೆ ಮತ್ತು ಸಂಸ್ಥೆಯ ಸಿಬ್ಬಂದಿಗೆ ತರಬೇತಿ ಶಿಬಿರ ಮಂಗಳವಾರ ಜರಗಿತು. ರಾಷ್ಟ್ರಧ್ವಜದ ಧ್ವಜಾರೋಹಣದ ನೆರವೇರಿಸಿದ ನಂತರ ಸಂಸ್ಥೆಯ ಸಿಬ್ಬಂದಿ ವರ್ಗದವರಿಗೆ ಟೀಮ್ ಬಿಲ್ಡ್ ವಿಷಯದಲ್ಲಿ ಜೆ. ಸಿ. ಐ. ಇಂಡಿಯಾದ ಅಂತರಾಷ್ಟ್ರೀಯ ತರಬೇತುದಾರರಾದ ಸುಭಾಶ್ ಬಂಗೇರ ಉಡುಪಿ ಇವರಿಂದ ತರಬೇತಿ ಕಾರ್ಯಕ್ರಮ ಜರಗಿತು. ತರಬೇತಿಯನ್ನು ಜೆ. ಸಿ. ಐ ಆಡಳಿತ ಮಂಡಳಿ ಸದಸ್ಯರಾದ ಸುಕುಮಾರ್‌ರವರು ದೀಪ ಪ್ರಜ್ವಲನಗೊಳಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಜೆ. ಸಿ. ಐ. ಸಂಸ್ಥೆಯು ಇರುವುದೇ ಯುವಕರಿಗೆ ತರಬೇತಿಯನ್ನು ನೀಡುವ ಅಂತರಾಷ್ಟ್ರೀಯ ಸಂಸ್ಥೆ. ಜೆ. ಸಿ. ಐ. ಯಿಂದಾಗಿ ನಮ್ಮ ದೇಶದಲ್ಲಿ ಹಲವಾರು ನಾಯಕರು ಮೂಡಿ ಬಂದಿರುತ್ತಾರೆ. ಈ ತರಬೇತಿಯಿಂದ ಸೊಸೈಟಿಯ ಸಿಬ್ಬಂದಿಗಳು ಇನ್ನೂ ಹೆಚ್ಚು ಕ್ರಿಯಾಶೀಲರಾಗಿ ಬ್ಯಾಂಕಿನ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳಲು ಸಹಾಯಕವಾಗಿದೆ ಎಂದರು. ಸಂಸ್ಥೆಯ ನಿರ್ದೇಶಕರುಗಳಾದ ವೈ ಜಿ ರಸೂಲ್, ಗಿರೀಶ್ ಪಲಿಮಾರು, ಶಿವರಾಮ ಶೆಟ್ಟಿ, ವಾಸುದೇವ ಪಲಿಮಾರು, ಮಾಧವ ಆಚಾರ್ಯ, ಯಶವಂತ, ರಾಜಾರಾಮ ರಾವ್‌, ಸ್ಟ್ಯಾನಿ ಕ್ವಾಡ್ರಸ್, ಸುಚರಿತ ಎಲ್ ಅಮೀನ್, ಕಾಂಚನ ಉಪಸ್ಥಿತರಿದ್ದರು. ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿ ಅಧ್ಯಕ್ಷರಾದ ಸುಧೀರ್ ಕುಮಾರ್ ಸ್ವಾಗತಿಸಿದರು. ಮುಖ್ಯಕಾರ್ಯನಿರ್ವಹಣಾಧಿಕಾರಿ ದೀಪಕ್ ಸಾಲ್ಯಾನ್ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ಗುರುರಾಜ ಪೂಜಾರಿಯವರು ವಂದಿಸಿದರು.
15 Aug 2023, 07:26 PM
Category: Kaup
Tags: