ಶಿರ್ವ : ಶ್ರೀ ವಿಶ್ವ ಬ್ರಾಹ್ಮಣ ಯುವ ಸಂಗಮ, ಮಹಿಳಾ ಬಳಗದ ವತಿಯಿಂದ ಆಷಾಢ ಸಂಭ್ರಮ ಕಾರ್ಯಕ್ರಮ
ಶಿರ್ವ : ಶ್ರೀ ವಿಶ್ವ ಬ್ರಾಹ್ಮಣ ಯುವ ಸಂಗಮ (ರಿ) ಶಿರ್ವ ಮತ್ತು ಮಹಿಳಾ ಬಳಗದ ಆಷಾಢ ಸಂಭ್ರಮ ಕಾರ್ಯಕ್ರಮ ಹೋಟೆಲ್ ಮಂದಾರ ಸಭಾಂಗಣದಲ್ಲಿ ಜರುಗಿತು.
ಶಿರ್ವ ನ್ಯೂ ಭಾರ್ಗವಿ ಜುವೆಲರ್ಸ್ನ ಮಾಲಕರಾದ ಸೌಮ್ಯ ಗಣೇಶ ಆಚಾರ್ಯ ದೀಪ ಬೆಳಗಿಸಿ, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಬಂಟಕಲ್ಲು ಶ್ರೀ ವಿಶ್ವಕರ್ಮ ಸಂಘ ಗಾಯತ್ರಿ ವೃಂದದ ಮಾಜಿ ಅಧ್ಯಕ್ಷರಾದ ವಸಂತಿ ಅಶೋಕ್ ಆಚಾರ್ಯರು ಆಷಾಢ ಸಂಭ್ರಮ ಹಿರಿಯರು ನಡೆಸಿಕೊಂಡು ಬಂದ ಆಚಾರ ವಿಚಾರ ಸಂಸ್ಕೃತಿ ಕಿರಿಯರಿಗೆ ನೀಡುವುದರ ಮೂಲಕ ಸಂಭ್ರಮ ಸಂಗಮವಾಗಿ ಬೆಳೆಯಬೇಕೆಂದು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಮಹಿಳಾ ಬಳಗದ ಅಧ್ಯಕ್ಷೆ ಸುಮತಿ ಭಾಸ್ಕರಾಚಾರ್ಯ, ಸಂಗಮದ ಗೌರವಾಧ್ಯಕ್ಷ ಸುರೇಶ ಆಚಾರ್ಯ, ಅಧ್ಯಕ್ಷ ಉಮೇಶ್ ಆಚಾರ್ಯ, ಕಾರ್ಯದರ್ಶಿ ಮಾಧವಾಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮಹಿಳಾ ಬಳಗದ ಸದಸ್ಯರು ಪ್ರಾರ್ಥಿಸಿ, ಕಾರ್ಯದರ್ಶಿ ಪ್ರೀತಿ ಉಮೇಶ್ ಆಚಾರ್ಯ ಸ್ವಾಗತಿಸಿದರು, ಮಂಜುಳಾ ಉಮೇಶ್ ಆಚಾರ್ಯ ವಂದಿಸಿದರು. ಶರ್ಮಿಳ ಸದಾಶಿವಾಚಾರ್ಯ ಕಾರ್ಯಕ್ರಮ ನಿರೂಪಿಸಿ, ಪ್ರಶಾಂತ್ ಆಚಾರ್ಯ ಮತ್ತು ಶಶಿರಾಜ್ ಆಚಾರ್ಯ ಸಾಂಸ್ಕೃತಿಕ ಕಾರ್ಯಕ್ರಮವನ್ನು ಸಂಘಟಿಸಿದ್ದರು.
