ಶಿರ್ವ : ಸಮುದಾಯ ಆರೋಗ್ಯ ಕೇಂದ್ರದ ಆರೋಗ್ಯ ಸುರಕ್ಷಾ ಅಧಿಕಾರಿ ಸುಧಾಮತಿರವರಿಗೆ ಬೀಳ್ಕೊಡುಗೆ
ಶಿರ್ವ : ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕಳೆದ 15 ವರ್ಷಗಳಿಂದ ಆರೋಗ್ಯ ಸುರಕ್ಷಾ ಅಧಿಕಾರಿಯಾಗಿ ಸೇವೆ ನೀಡಿದ ಸುಧಾಮತಿಯವರು ಸ್ವಯಂ ನಿವೃತ್ತಿ ಹೊಂದಿದ ಪ್ರಯುಕ್ತ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು, ಸಿಬ್ಬಂದಿವರ್ಗದ ವತಿಯಿಂದ ಬೀಳ್ಕೊಡುಗೆ ನಡೆಯಿತು.
ಈ ಸಂದರ್ಭ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಸುಬ್ರಹ್ಮಣ್ಯ ರಾವ್ ಮಾತನಾಡಿ ಕನಿಷ್ಠ ಸಂಬಳದಲ್ಲಿ ಗರಿಷ್ಠ ಸೇವೆ ನೀಡಿದ ಸುಧಾಮತಿಯವರ ಸೇವೆ ಶ್ಲಾಘನಾರ್ಹವಾಗಿದ್ದು ಅವರ ಕೊಡುಗೆ ಸದಾ ಸ್ಮರಣೀಯ. ಮುಂದಿನ ಜೀವನ ಉಜ್ವಲವಾಗಲಿ ಎಂದು ಹಾರೈಸಿ ಶುಭಕೋರಿದರು.
ಕಳತ್ತೂರು ಉಪಕೇಂದ್ರದ ಸಮುದಾಯ ಆರೋಗ್ಯ ಅಧಿಕಾರಿ ದೀಪಿಕಾ, ಸಮುದಾಯ ಆರೋಗ್ಯಕೇಂದ್ರ ಹಿರಿಯ ಶುಶ್ರೂಷಕಿ ಉಷಾ ಮರಾಠೆ, ದಂತಚಿಕಿತ್ಸಾ ವೈದ್ಯಾಧಿಕಾರಿ ಡಾ.ಗಾಯತ್ರಿ ಸಂತೋಷ್, ಆಪ್ತ ಸಮಾಲೋಚಕ ದಿನೇಶ್ ಮಡಿವಾಳ ಸುಧಾಮತಿರವರ ಸೇವೆಯ ಬಗ್ಗೆ ಮಾತನಾಡಿ ಅಭಿನಂದಿಸಿ ಶುಭ ಕೋರಿದರು.
ಆರೋಗ್ಯ ಕೇಂದ್ರದ ವೈದ್ಯರು, ಶುಶ್ರೂಷಕಿಯವರು, ವಿವಿಧ ವಿಭಾಗಗಳ ತಂತ್ರಜ್ಞರು, ಸಿಬ್ಬಂಧಿವರ್ಗದವರು ಉಪಸ್ಥಿತರಿದ್ದರು.
