ಉಡುಪಿ : ಜಿಲ್ಲಾ ಲಯನ್ಸ್ 317C ಸಂಪುಟ - ಪದಪ್ರದಾನ 'ಬೆಳಕು' ಸಮಾರಂಭ ಸಂಪನ್ನ
Thumbnail
ಉಡುಪಿ : ಜಿಲ್ಲಾ ಲಯನ್ಸ್ 317C ಸಂಪುಟ - ಪದಪ್ರದಾನ 'ಬೆಳಕು' ಸಮಾರಂಭ ಶನಿವಾರ ಅಂಬಾಗಿಲು ಅಮೃತ್ ಗಾರ್ಡನ್‌ನಲ್ಲಿ ನಡೆಯಿತು. ಹಿಂದಿನ ಅಂತಾರಾಷ್ಟ್ರೀಯ ನಿರ್ದೇಶಕ ಕೆ.ಜಿ. ರಾಮಕೃಷ್ಣಮೂರ್ತಿ ನೂತನ ಸಂಪುಟ ಪದಪ್ರದಾನ ನೆರವೇರಿಸಿದರು. ಲಯನ್ಸ್ ಜಿಲ್ಲಾ ಕಾರ್ಯಕ್ರಮ ಉದ್ಘಾಟಿಸಿದರು. ಪ್ರಥಮ ಮಹಿಳೆ ಓಫಿಲಿಯಾ ಫಿಲೋಮಿನಾ ಕರ್ನೆಲಿಯೋ ಬೆಳಕು ಪದ ಪ್ರಧಾನ ಸಮಾರಂಭವನ್ನು ಉದ್ಘಾಟಿಸಿದರು. ಉಡುಪಿ ಧರ್ಮಪ್ರಾಂತದ ಬಿಷಪ್ ರೈ| ರೆ| ಡಾ| ಜೆರಾಲ್ಡ್ ಐಸಾಕ್ ಲೋಬೋ ಅವರು ಆಶೀರ್ವಚನ ನೀಡಿ, ಡಾ| ನೇರಿ ಕರ್ನೇಲಿಯೊ ಅವರು ಶೈಕ್ಷಣಿಕ ಕ್ಷೇತ್ರದಲ್ಲಿ ಸೇವೆಗಾಗಿ ತೊಡಗಿಸಿಕೊಂಡವರು. ಉತ್ತಮ ಸಮಾಜ ನಿರ್ಮಾಣಕ್ಕೆ ಶಿಕ್ಷಣ ಕ್ಷೇತ್ರವೇ ಅಡಿಪಾಯವಾಗಿದೆ. ದೂರದೃಷ್ಟಿ ಯೋಜನೆಗಳ ಮೂಲಕ ಅಸಂಖ್ಯಾತ ಜೀವನವನ್ನು ಬೆಳಗಿಸಿದ್ದಾರೆ. ಉತ್ತಮ ನಾಯಕತ್ವ ಸಂಘಟನಾತ್ಮಕ ದೃಷ್ಟಿಕೋನ ಹೊಂದಿರುವ ಅವರಿಂದ ಲಯನ್ ಅಧಿಕಾರಾವಧಿಯಲ್ಲಿ ಸಮಾಜಕ್ಕೆ ಇನ್ನಷ್ಟು ಬೆಳಕು ಸಿಗುವಂತಾಗಲಿ ಎಂದು ಹಾರೈಸಿದರು. ಲಯನ್ಸ್ ಗವರ್ನರ್ ಡಾ| ನೇರಿ ಕರ್ನೇಲಿಯೋ ಅವರು ಮಾತನಾಡಿ, ಲಯನ್ಸ್ 317ಸಿ ಉತ್ತಮ ಸೇವಾ ಕಾರ್ಯದ ಮೂಲಕ ಮಾದರಿ ಯಾಗಿದೆ. ಶಿಕ್ಷಣ, ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿ ಸಾಕಷ್ಟು ಯೋಜನೆಗಳನ್ನು ರೂಪಿಸುವ ಜತೆಗೆ ಸೇವಾ ಮತ್ತು ಸಮಾಜಮುಖಿ ಚಟುವಟಿಕೆ ಕಾರ್ಯಕ್ರಮಗಳನ್ನು ಹೆಚ್ಚು ಹಮ್ಮಿಕೊಳ್ಳಲಾಗುವುದು ಎಂದರು. ಸೇವಾ ಚಟುವಟಿಕೆಯಾಗಿ ಹಿಂದಿನ ಜಿಲ್ಲಾ ಗವರ್ನರ್ ಜಿ. ಶ್ರೀನಿವಾಸ್ ಪ್ರಾಯೋಜಕತ್ವದಲ್ಲಿ ಜಿಲ್ಲೆಯ 10 ಶಾಲೆಗಳಿಗೆ ಲ್ಯಾಪ್ ಟಾಪ್ ವಿತರಿಸಲಾಯಿತು. ಕಾರವಾರ ಡಿವೈಎಸ್ಪಿ ವೆಲೆಂಟೈನ್ ಡಿ'ಸೋಜಾ ಅವರನ್ನು ಸಮ್ಮಾನಿಸಲಾಯಿತು. ಲಯನ್ಸ್ ಮಾಜಿ ನಿರ್ದೇಶಕ ಕೆ. ವಂಶಿಧರ್ ಬಾಬು, ಮಲ್ಟಿಪಲ್ ಚೇರ್‌ಪರ್ಸನ್ ರಾಜಶೇಖರಯ್ಯ, ಲಯನ್ಸ್ ನಿಕಟಪೂರ್ವ ಜಿಲ್ಲಾ ಗವರ್ನರ್ ಡಾ| ಎಂ. ಕೆ. ಭಟ್, ದ್ವಿತೀಯ ಉಪ ಜಿಲ್ಲಾ ಗವರ್ನರ್ ಸಪ್ಪಾ ಸುರೇಶ್, ಲಯನ್ಸ್ ಕ್ಲಬ್ ಪ್ರಮುಖರಾದ ಪ್ರಕಾಶ್ ಟಿ. ಸೋನ್ಸ್, ಬಿ. ಜಯಕರ್ ಶೆಟ್ಟಿ ಇಂದ್ರಾಳಿ, ಡಾ| ತಲ್ಲೂರು ಶಿವರಾಮ ಶೆಟ್ಟಿ, ಎನ್. ಎಂ. ಹೆಗಡೆ, ರವಿರಾಜ್ ನಾಯಕ್, ರಿಚರ್ಡ್ ಡಯಾಸ್, ಆದಿತ್ಯ ಆರ್. ಶೇಟ್, ಜೆರಾಲ್ಡ್ ಫೆರ್ನಾಂಡಿಸ್, ಹರಿಪ್ರಸಾದ್ ರೈ, ಮೆಲ್ವಿನ್ ಅರಾನ್ನ, ಜಾರ್ಜ್ ಡಿ'ಸೋಜಾ, ಆಲ್ಡನ್ ಕರ್ನೇಲಿಯೊ ಉಪಸ್ಥಿತರಿದ್ದರು. ಸುಗುಣಾ ಕುಮಾ‌ ಸ್ವಾಗತಿಸಿ, ಉಮೇಶ್ ನಾಯಕ್ ವಂದಿಸಿ, ಡಾ| ಜಗದೀಶ ಹೊಳ್ಳ ನಿಹಾಲ್ ಹೆಗ್ಡೆ ನಿರೂಪಿಸಿದರು.
Additional image
21 Aug 2023, 08:37 PM
Category: Kaup
Tags: