ಕಾಪು : ತಾಯಿಯ ಸಂಸ್ಮರಣೆಗೆ ಪ್ರಥಮ ವರ್ಷ ಕಾಪುವಿನಲ್ಲಿ ಮೂರ್ತಿ ಪ್ರತಿಷ್ಠೆ ; ಮೂರನೇ ವರ್ಷ‌ ಮುಂಬೈನಲ್ಲಿ ಬೃಹತ್ ವೈದ್ಯಕೀಯ ಶಿಬಿರ
Thumbnail
ಕಾಪು : ಮುಂಬೈ ಮಹಾನಗರದಲ್ಲಿ ಕಾಂಗ್ರೆಸ್ ಪಕ್ಷದ ಕಟ್ಟಾಳುವಾಗಿದ್ದು ಮಹಾನಗರ ಪಾಲಿಕೆಯ ಕಾರ್ಪೋರೇಟರ್ ಆಗಿ ಸೇವೆ ಸಲ್ಲಿಸಿದ್ದ ಗೀತಾ ಯಾದವ್ ಪೂಜಾರಿ ಅವರ ಮೂರನೇ ಪುಣ್ಯ ತಿಥಿಯ ಪ್ರಯುಕ್ತ ಮುಂಬಯಿ ಮಹಾನಗರದಲ್ಲಿ ಬೃಹತ್ ವೈದ್ಯಕೀಯ ಶಿಬಿರ ನಡೆಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಮುಂಬೈ ಮಹಾನಗರದಲ್ಲಿ ಕಾಂಗ್ರೆಸ್ ಪಕ್ಷದ ಕಟ್ಟಾಳುವಾಗಿ, ಮುಂಬಯಿ ಮಹಾನಗರ ಪಾಲಿಕೆಯ ಕಾರ್ಪೋರೇಟರ್ ಆಗಿದ್ದ ಕಾಪು ಪಡುಗ್ರಾಮದ ಗರಡಿಮನೆ ಗೀತಾ ಯಾದವ್ ಪೂಜಾರಿ ಅವರು ರಾಜಕೀಯದ ಜೊತೆಗೆ ಧಾರ್ಮಿಕ, ಶೈಕ್ಷಣಿಕ ಮತ್ತು ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದರು. ಮುಂಬೈ ಜೋಸೆಫ್ ಪಠೇಲ್ ಎಸ್ಟೇಟ್ ನವರಾತ್ರಿ ದುರ್ಗಾ ಪೂಜಾ ಮಂಡಲ್‌ನ ಸಂಸ್ಥಾಪಕರಾಗಿದ್ದ ಅವರು, ಮುಂಬೈ ತುಳುನಾಡ ಕನ್ನಡಿಗರ ಜೊತೆಗೂ ಉತ್ತಮ ಭಾಂದವ್ಯವನ್ನು ಹೊಂದಿದ್ದು ಕಾಪು ಪರಿಸರದಲ್ಲಿಯೂ ಸಮಾಜ ಸೇವಾ ಕಾರ್ಯಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಅವರು ೨೦೨೦ ಸೆ. ೩ರಂದು ಹೃದಯಘಾತಕ್ಕೊಳಗಾಗಿ ಮೃತಪಟ್ಟಿದ್ದರು. ದಿ| ಗೀತಾ ಯಾದವ್ ಪೂಜಾರಿ ಅವರ ನೆನಪಿಗಾಗಿ ಪತಿ ವಸಂತ್ ಯಾದವ್, ಮಕ್ಕಳಾದ ಮನೋಜ್ ವಿ. ಯಾದವ್, ಸಂತೋಷ್ ವಿ. ಯಾದವ್, ವಿನಯ್ ವಿ. ಯಾದವ್ ಮತ್ತು ನವದುರ್ಗಾ ಲಕ್ಷೀ ಅವರು ೨೦೨೧ರಲ್ಲಿ ಕಾಪು ಗರಡಿ ರಸ್ತೆಯ ನವದುರ್ಗಾ ಲಕ್ಷ್ಮೀ ನಿವಾಸ್ ಮನೆಯ ಆವರಣದಲ್ಲಿ ಮಾರ್ಬಲ್ ಶಿಲೆಯ ಗುಡಿಯನ್ನು ನಿರ್ಮಿಸಿ, ಅದರಲ್ಲಿ ಅವರ ಪುತ್ಥಳಿಯನ್ನು ಪ್ರತಿಷ್ಟಾಪಿಸಿದ್ದರು. ಗೀತಾ ಯಾದವ್‌ರವರ ಪುತ್ಥಳಿಯ ಜತೆಗೆ ಅವರ ತಾಯಿ ಕಲ್ಯಾಣಿ ಬಾಯಿ ಪೂಜಾರಿ, ಅಜ್ಜಿ ಮುತ್ತಕ್ಕ ಬೈದಿ ಪೂಜಾರ್‍ತಿ ಅವರ ಮೂರ್ತಿಯನ್ನೂ ಕೆತ್ತಿಸಿ, ಗುಡಿಯೊಳಗೆ ಪ್ರತಿಷ್ಠಾಪನೆ ಮಾಡಿಸಿ ಕರಾವಳಿಯಲ್ಲಿ ಭಾರೀ ಸುದ್ದಿಯಾಗಿದ್ದರು. ದಿ| ಗೀತಾ ಯಾದವ್ ಪೂಜಾರಿ ಅವರ ಮೂರನೇ ಸಂಸ್ಮರಣೆಯ ಮುಂಬಯಿಯ ವರ್ಸೋವಾದಲ್ಲಿ ಬೃಹತ್ ವೈದ್ಯಕೀಯ ತಪಾಸಣಾ ಶಿಬಿರವನ್ನು ಆಯೋಜಿಸಿದ್ದು ಶಿಬಿರದಲ್ಲಿ ಉಚಿತ ಕಣ್ಣಿನ ತಪಾಸಣೆ, ಶಸ್ತ್ರ ಚಿಕಿತ್ಸೆ, ಕನ್ನಡಕ ವಿತರಣೆ, ಉಚಿತ ಔಷಧ ವಿತರಣೆ, ಬ್ಲಡ್ ಪ್ರೆಶರ್ ಮತ್ತು ಡಯಾಬಿಟಿಸ್ ಪರೀಕ್ಷೆ, ಅಸ್ತಮಾ ಪರೀಕ್ಷೆ, ಬಿಎಂಐ ಪರೀಕ್ಷೆ, ದಂತ ತಪಾಸಣೆ, ರಕ್ತ ಗುಂಪು ವರ್ಗೀಕರಣ, ಯೂರಿಕ್ ಆಸಿಡ್ ತಪಾಸಣೆ ನಡೆಸಲಾಯಿತು. ಒಂದು ಸಾವಿರಕ್ಕೂ ಅಽಕ ಮಂದಿ ಪಾಲ್ಗೊಂಡು ಶಿಬಿರದ ಪ್ರಯೋಜನ ಪಡೆದುಕೊಂಡರು. ಕಾರ್ಯಕ್ರಮದ ಬಗ್ಗೆ ದಿ| ಗೀತಾ ಯಾದವ್ ಪೂಜಾರಿ ಅವರ ಪುತ್ರ ಸಂತೋಷ್ ವಿ. ಯಾದವ್ ಅವರು ಈ ಬಗ್ಗೆ ಮಾಹಿತಿ ನೀಡಿ, ನಮ್ಮ ತಾಯಿ ಜೀವಿತಾವಧಿಯಲ್ಲಿ ನಡೆಸಿರುವ ಸೆವಾ ಕಾರ್ಯಗಳು ನಮಗೆಲ್ಲರಿಗೂ ಅನುಕರಣೀಯವಾಗಿದೆ. ರಾಜಕೀಯ, ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕವೂ ಸೇರಿದಂತೆ ವಿವಿಧ ಸಮಾಜ ಸೇವಾ ಕಾರ್ಯಕ್ರಮಗಳನ್ನು ನಡೆಸಿದ್ದು ಅವರ ಹೆಸರನ್ನು ಶಾಶ್ವತವಾಗಿಸುವ ಪ್ರಯತ್ನವಾಗಿ ಗುಡಿ ನಿರ್ಮಿಸಿ, ಶಿಲೆಕಲ್ಲಿನಲ್ಲಿ ಮೂರ್ತಿ ಕೆತ್ತಿಸಿ, ಪ್ರತಿಷ್ಠಾಪಿಸಿದ್ದೇವೆ. ಅವರ ನೆನಪಿನಲ್ಲಿ ಈ ಬಾರಿ ಮೂರನೇ ವರ್ಷದ ಸಾಮೂಹಿಕ ವೈದ್ಯಕೀಯ ತಪಾಸಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
Additional image Additional image
06 Sep 2023, 06:05 PM
Category: Kaup
Tags: