ಸೆಪ್ಟೆಂಬರ್ 13 : ಕಾಪುವಿನ ಕೈಪುಂಜಾಲು ದರ್ಗಾದಲ್ಲಿ ಸಫರ್ ಝಿಯಾರತ್
ಕಾಪು : ಪೊಲಿಪು ಜಾಮಿಯಾ ಮಸೀದಿಯ ಅಧೀನದಲ್ಲಿರುವ ಕೈಪುಂಜಾಲು ಸಯ್ಯದ್ ಅರಬೀ
ವಲಿಯುಲ್ಲಾರವರ ದರ್ಗಾದ ವಾರ್ಷಿಕ ಸಫರ್ ಝಿಯಾರತ್ ಸಮಾರಂಭ ಸೆಪ್ಟೆಂಬರ್ 13ರಂದು ನಡೆಯಲಿದೆ ಎಂದು ಕಾರ್ಯಕ್ರಮ ಆಯೋಜನಾ ಸಮಿತಿ ಪ್ರಧಾನ ಕಾರ್ಯದರ್ಶಿ ಶಬ್ಬಿರ್ ಅಹಮದ್ ತಿಳಿಸಿದ್ದಾರೆ.
ಶುಕ್ರವಾರ ಕಾಪು ಪ್ರೆಸ್ ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.ಈ ದರ್ಗಾದಲ್ಲಿ ಪ್ರತೀ ವರ್ಷ ಇಸ್ಲಾಮಿಕ್ ಕ್ಯಾಲೆಂಡರ್‌ನ ಸಫರ್ ತಿಂಗಳ ಕೊನೆಯ ಬುಧವಾರ ಸಫರ್ ಝಿಯಾರತ್ ನಡೆಯಲಿದೆ. ಅಂದು ಹಿಂದೂ, ಮುಸ್ಲಿಂ, ಕ್ರೈಸ್ತರು ಜಾತಿ ಮತಭೇದವಿಲ್ಲದೆ ತಮ್ಮ ಹರಕೆ ತೀರಿಸುತ್ತಾರೆ ಎಂದರು.
ಸೆಪ್ಟೆಂಬರ್ 13ರಂದು ಬೆಳಗ್ಗೆ 6 ರಿಂದ ಸಂಜೆ 7 ರವರೆಗೆ ಝಿಯಾರತ್ ನಡೆಯಲಿದೆ. ಸಫರ್ ಝಿಯಾರತ್‌ಗೆ 11 ಮಂದಿಯ ಉಸ್ತುವಾರಿ ಸಮಿತಿ ರಚಿಸಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಸಮಿತಿ ಮುಖ್ಯಸ್ಥ ಶಾಬಾನ್ ಫಕೀರಬ್ಬ, ಸದಸ್ಯರಾದ ರಝಬ್ ಉಮರಬ್ಬ, ಹಾಜಬ್ಬ ಕೊಂಬಗುಡ್ಡೆ, ಕೆ. ಎಂ. ರಝಾಕ್ ಉಪಸ್ಥಿತರಿದ್ದರು.
