ಸೆಪ್ಟೆಂಬರ್ 16 : ಕಾಪು ಉಪ ಅಂಚೆ ಕಚೇರಿಯಲ್ಲಿ ಅಂಚೆ ಜನ ಸಂಪರ್ಕ ಅಭಿಯಾನ
ಕಾಪು : ಅಂಚೆ ಜನ ಸಂಪರ್ಕ ಅಭಿಯಾನವನ್ನು ಕಾಪು ಉಪ ಅಂಚೆ ಕಚೇರಿಯಲ್ಲಿ ಸೆಪ್ಟೆಂಬರ್ 16, ಶನಿವಾರ ಬೆಳಿಗ್ಗೆ 9 ಗಂಟೆ ಯಿಂದ ಸಂಜೆ 5 ಗಂಟೆಯವರೆಗೆ ಹಮ್ಮಿಕೊಳ್ಳಲಾಗಿದೆ.
ಈ ಅಭಿಯಾನದಲ್ಲಿ ವಿವಿಧ ಅಂಚೆ ಸೇವೆಗಳ ಬಗ್ಗೆ ಮಾಹಿತಿ ನೀಡುವುದು, ಎಲ್ಲ ರೀತಿಯ ಹೊಸ ಅಂಚೆ ಉಳಿತಾಯ ಖಾತೆಗಳನ್ನು ಮತ್ತು ಹೊಸ ವಿಮಾ ಪಾಲಿಸಿಗಳನ್ನು ತೆರೆಯುವುದು, ಹೊಸ ಆಧಾರ್ ನೊಂದಣಿ, ಬಯೋಮೆಟ್ರಿಕ್, ವಿಳಾಸ ಹಾಗು ಮೊಬೈಲ್ ಸಂಖ್ಯೆ ಬದಲಾವಣೆ, ಸರಕಾರದ ವಿವಿಧ ಸವಲತ್ತುಗಳಿಗಾಗಿ ಅಂಚೆ ಖಾತೆಗೆ ಆಧಾರ್ ಜೋಡಣೆ, ಹತ್ತು ಲಕ್ಷ ರೂಪಯಿವರೆಗಿನ ಅಪಘಾತ ವಿಮೆಗಾಗಿ ಟಾಟಾ ಇನ್ಸುರೆನ್ಸ್ ಮೊದಲಾದ ಸೇವೆಗಳನ್ನು ಕಾಪು ಅಂಚೆ ಕಚೇರಿಯಲ್ಲಿಯೇ ಗ್ರಾಹಕರಿಗೆ ಒದಗಿಸುವ ವಿಶೇಷ ವ್ಯವಸ್ಥೆಯನ್ನು ಮಾಡಲಾಗಿದೆ.
ಈ ಅಭಿಯಾನದ ಲಾಭವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕಾಗಿ ಉಡುಪಿ ಅಂಚೆ ವಿಭಾಗದ ಅಧೀಕ್ಷಕ ರಮೇಶ ಪ್ರಭು ವಿನಂತಿಸಿದ್ದಾರೆ.
ಗ್ರಾಹಕರು ತರಬೇಕಾದ ದಾಖಲೆಗಳು : ಆಧಾರ್ ಪ್ರತಿ, ಪಾನ್ ಕಾರ್ಡ್ ಪ್ರತಿ, ಗುರುತು ಪತ್ರ, ಪಾಸ್ ಪೊರ್ಟ್ ಫೊಟೊ-2. ಜನನ ಪ್ರಮಾಣ ಪತ್ರ [SSA]. ಹೆಚ್ಚಿನ ವಿವರಗಳಿಗೆ ಪೋಸ್ಟ್ ಮಾಸ್ಟರ್ ಕಾಪುರವರನ್ನು ಸಂಪರ್ಕಿಸಬಹುದು.
