ಉಚ್ಚಿಲ ದಸರಾ-2023: ಯುವ ನೃತ್ಯೋತ್ಸವಕ್ಕಾಗಿ ಸಾರ್ವಜನಿಕರಿಂದ ಆಡಿಶನ್ ರೌಂಡ್‌ಗೆ ಆಹ್ವಾನ
Thumbnail
ಉಚ್ಚಿಲ : ದ.ಕ.ಮೊಗವೀರ ಮಹಾಜನ ಸಂಘ ಆಡಳಿತದ ಶ್ರೀ ಕ್ಷೇತ್ರ ಉಚ್ಚಿಲ ಶ್ರೀಮಹಾಲಕ್ಷ್ಮೀ ದೇವಳದಲ್ಲಿ ಈ ಬಾರಿ ಅದ್ದೂರಿಯಾಗಿ ನಡೆಯಲಿರುವ ಉಚ್ಚಿಲ ಯುವ ದಸರಾ -2023ರ ಅಂಗವಾಗಿ ಹಮ್ಮಿಕೊಂಡಿರುವ ನೃತ್ಯೋತ್ಸವ ಸಲುವಾಗಿ ಸಾರ್ವಜನಿಕರಿಂದ ನೃತ್ಯ ಸ್ಪರ್ಧೆಯ ಆಡಿಶನ್ ರೌಂಡ್‌ಗಾಗಿ ಸ್ಪರ್ಧಿಗಳನ್ನು ಆಹ್ವಾನಿಸಲಾಗಿದೆ. ಅಕ್ಟೋಬರ್ 8ರಂದು ಸಂಜೆ 3 ಗಂಟೆಯಿಂದ 6 ಗಂಟೆವರೆಗೆ ಉಚ್ಚಿಲದ ಮೊಗವೀರ ಭವನದಲ್ಲಿ ಆಡಿಶನ್ ರೌಂಡ್ ಸ್ಪರ್ಧೆ ನಡೆಯಲಿದೆ. ಆಡಿಶನ್ ಸುತ್ತಿನ ಸ್ಪರ್ಧಾ ನಿಯಮಗಳು: ಸ್ಪರ್ಧೆಯಲ್ಲಿ ಪ್ರತಿಯೊಂದು ನೃತ್ಯ ತಂಡದಲ್ಲಿ ಕನಿಷ್ಠ 5 ಜನರಿಗೆ ಅವಕಾಶ. ಯಾವುದೇ ವಯಸ್ಸಿನ ಮಿತಿ ಇಲ್ಲ, ತಂಡವೊಂದಕ್ಕೆ 5(4+1) ನಿಮಿಷದ ಅವಕಾಶ. ಆಡಿಶನ್ ಸುತ್ತಿನಲ್ಲಿ ಯಾವುದೇ ಕಾಸ್ಟ್ಯೂಮ್ (ವೇಷಭೂಷಣ) ಅಗತ್ಯವಿಲ್ಲ. ಆಡಿಶನ್ ಸುತ್ತಿನಲ್ಲಿ ಆಯ್ಕೆಯಾದ ತಂಡಗಳು ಅಕ್ಟೋಬರ್ 15ರಂದು ನಡೆಯುವ ಯುವ ದಸರಾ ಉತ್ಸವದ ನೃತ್ಯ ಸ್ಪರ್ಧೆಗೆ ಅರ್ಹತೆ ಪಡೆಯುತ್ತಾರೆ. ಆಡಿಶನ್ ಸುತ್ತಿನಲ್ಲಿ ಒಬ್ಬ ಸ್ಪರ್ಧಿ ಬೇರೆ ಬೇರೆ ತಂಡಗಳಲ್ಲಿ ನೃತ್ಯ ಸ್ಪರ್ಧೆಗಳಲ್ಲಿ ಭಾಗವಹಿಸಬಹುದು. ಯಾವುದೇ ಭಾಷೆ ಅಥವಾ ನೃತ್ಯ ಪ್ರಾಕಾರದ ನಿರ್ಬಂಧವಿಲ್ಲ. ಫೈನಲ್ ಸ್ಪರ್ಧೆಗಳಲ್ಲಿ ವಿಜೇತರಿಗೆ ಪ್ರಶಸ್ತಿ ಸಹಿತ ಪ್ರಥಮ ಬಹುಮಾನ 30ಸಾವಿರ ರೂ., ದ್ವಿತೀಯ 20ಸಾವಿರ ರೂ., ತೃತೀಯ 15ಸಾವಿರ ರೂ., ಚತುರ್ಥ 10 ಸಾವಿರ ರೂ. ಹಾಗೂ 5 ತಂಡಗಳಿಗೆ ತಲಾ 5ಸಾವಿರ ರೂ. ನಂತೆ ಪ್ರೋತ್ಸಾಹಕ ಬಹುಮಾನ ನೀಡಲಾಗುವುದು ಎಂದು ದಸರಾ ಸಮಿತಿ ಪ್ರಕಟಣೆ ತಿಳಿಸಿದೆ.
22 Sep 2023, 12:33 PM
Category: Kaup
Tags: