ಸೆಪ್ಟೆಂಬರ್ 25 : ಕಾಪು ಕುಲಾಲ ಯುವ ವೇದಿಕೆ, ಕುಲಾಲ ಸಂಘದಿಂದ ರಾಜೇಶ್ ಕುಲಾಲ್ ಕುಟುಂಬಕ್ಕೆ ಆರ್ಥಿಕ‌‌ ನೆರವು ಹಸ್ತಾಂತರ ಕಾರ್ಯಕ್ರಮ
Thumbnail
ಕಾಪು : ಗ್ಯಾಂಗ್ರಿನ್ ಕಾಯಿಲೆಯಿಂದ ತನ್ನ ಒಂದು ಕಾಲು ಕಳೆದು, ಇನ್ನೊಂದು ಕಾಲು ಉಳಿಸಲು ಪ್ರಯತ್ನ ಮಾಡುತ್ತಲಿರುವ ಕಾಪು ಅದಮಾರು ನಿವಾಸಿ ರಾಜೇಶ್ ಕುಲಾಲ್ ಕುಟುಂಬಕ್ಕೆ ಕಾಪು ಕುಲಾಲ ಯುವ ವೇದಿಕೆ ಹಾಗೂ ಕುಲಾಲ ಸಂಘ (ರಿ.) ಕಾಪು ವಲಯದ ವತಿಯಿಂದ ಸಂಗ್ರಹ ಗೊಂಡ ಧನಸಹಾಯವನ್ನು 25, ಸೋಮವಾರ ಬೆಳಿಗ್ಗೆ 11 ಗಂಟೆಗೆ ಕಾಪು ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ದಾನಿಗಳು, ಹಿತೈಷಿಗಳ ಸಹಭಾಗಿತ್ವದಲ್ಲಿ ರಾಜೇಶ್ ಕುಲಾಲ್ ಕುಟುಂಬಕ್ಕೆ ಹಸ್ತಾಂತರ ಮಾಡಲಿದ್ದಾರೆ. ಸ್ವಜಾತಿ ಮಿತ್ರರು, ಹಿತೈಷಿಗಳು ಅಂದು ನಮ್ಮೊಡನೆ ಭಾಗಿಯಾಗಿ ಎಂದು ಕಾಪು ಕುಲಾಲ ಯುವ ವೇದಿಕೆ ಪ್ರಮುಖರು ಉದಯ ಕುಲಾಲ್, ಕಾಪು ಕುಲಾಲ ಸಂಘದ ಅಧ್ಯಕ್ಷರು ಸಂದೀಪ್ ಬಂಗೇರ ಪ್ರಕಟಣೆಯಲ್ಲಿ ತಿಳಿಸಿರುವರು.
23 Sep 2023, 05:18 PM
Category: Kaup
Tags: