ಕಾಪು‌ : ಉದ್ದ ಜಿಗಿತದಲ್ಲಿ ರಾಷ್ಟಮಟ್ಟಕ್ಕೆ ಆಯ್ಕೆಯಾದ ಸುಶಾನ್ ಸುವರ್ಣರನ್ನು ಅಭಿನಂದಿಸಿದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ
Thumbnail
ಕಾಪು : ಕರ್ನಾಟಕ ರಾಜ್ಯ ಜೂನಿಯರ್ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಉದ್ದ ಜಿಗಿತದ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದು ರಾಷ್ಟ ಮಟ್ಟಕ್ಕೆ ಆಯ್ಕೆಯಾದ ಕಾಪು ವಿಧಾನಸಭಾ ಕ್ಷೇತ್ರದ ಬೆಳ್ಳಂಪಳ್ಳಿ ನಿವಾಸಿ ಸುಶಾನ್ ಸುವರ್ಣ ಅವರನ್ನು ಮಹಾಲಕ್ಷ್ಮಿ ಭಜನಾ ಮಂಡಳಿಯಲ್ಲಿ ಅಕ್ಟೋಬರ್ 2 ರಂದು ಕಾಪು ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಬೆಳ್ಳಂಪಳ್ಳಿ ಮೋಗವೀರ ಗ್ರಾಮಸಭಾ ಅಧ್ಯಕ್ಷರಾದ ಸುಧಾಕರ್ ಕಾಂಚನ್, ಮಹಾಲಕ್ಷ್ಮಿ ಭಜನಾ ಮಂಡಳಿಯ ಅಧ್ಯಕ್ಷರಾದ ಪ್ರಕಾಶ್ ಕಾಂಚನ್, ಕುಕ್ಕೆಹಳ್ಳಿ ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಪ್ರವೀಣ್ ಶೆಟ್ಟಿ, ಬೆಳ್ಳಂಪಳ್ಳಿ ಮೋಗವೀರ ಗ್ರಾಮಸಭಾ ಮಾಜಿ ಅಧ್ಯಕ್ಷರಾದ ಬಾಲು ಕೋಟ್ಯಾನ್, ಸುಶಾನ್ ಅವರ ಕುಟುಂಬದವರಾದ ಮುದ್ದು ಕೋಟ್ಯಾನ್, ಆನಂದಿ ಸುವರ್ಣ ಹಾಗೂ ಕುಕ್ಕೆಹಳ್ಳಿ ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಪಕ್ಷದ ಹಿರಿಯರು, ಪ್ರಮುಖರು, ಕಾರ್ಯಕರ್ತರು ಮತ್ತು ಸ್ಥಳೀಯರು ಉಪಸ್ಥಿತರಿದ್ದರು.
Additional image
02 Oct 2023, 07:07 PM
Category: Kaup
Tags: