ಹೆಜಮಾಡಿ : ರಸ್ತೆ ಮೇಲೆ ಬಿದ್ದ ವಿದ್ಯುತ್ ತಂತಿ - ತಪ್ಪಿದ ಅನಾಹುತ
Thumbnail
ಹೆಜಮಾಡಿ : ದಾರಿಯಲ್ಲಿ ಏನೇ ಆದರು ನಮಗ್ಯಾಕೆ ಎನ್ನುವ ಈ ಕಾಲದಲ್ಲಿ ರಸ್ತೆ ಮೇಲೆ ಬಿದ್ದ ವಿದ್ಯುತ್ ತಂತಿಯನ್ನು ನೋಡಿ‌ದ ಕೂಡಲೇ ಸಾಮಾಜಿಕ‌ ಕಾರ್ಯಕರ್ತನೋರ್ವ ಮೆಸ್ಕಾಂಗೆ ಮಾಹಿತಿ ನೀಡಿ‌, ತಕ್ಷಣ ಕಾರ್ಯಪ್ರವೃತ್ತನಾದ ಇಲಾಖೆ ಸಿಬ್ಬಂದಿ ಆಗಬಹುದಾದ ಅನಾಹುತ ತಪ್ಪಿಸಿದ ಘಟನೆ ಶುಕ್ರವಾರ ತಡರಾತ್ರಿ ಹೆಜಮಾಡಿಯಲ್ಲಿ ನಡೆದಿದೆ. ಗ್ರಾಮದ ಪರಪಟ್ಟ ಪರಿಸರದಲ್ಲಿ ವಿದ್ಯುತ್ ತಂತಿಯು ಕಡಿದು ರಸ್ತೆಯ ಮೇಲೆಯೇ ಬಿದ್ದಿರುವುದನ್ನು ಸಾಮಾಜಿಕ ಕಾರ್ಯಕರ್ತರಾದ ಚಂದ್ರಹಾಸ ನಡಿಕುದ್ರು ಇವರು ಗಮನಿಸಿ ತಕ್ಷಣ ಮೆಸ್ಕಾಂ ಇಲಾಖೆಯ ಸಿಬ್ಬಂದಿಯವರಾದ ಪ್ರವೀಣ್ ಇವರಿಗೆ ವಿಷಯವನ್ನು ತಿಳಿಸಿ ಅನಾಹುತವನ್ನು ತಪ್ಪಿಸಿದ್ದಲ್ಲದೇ ಆದಷ್ಟು ಶೀಘ್ರದಲ್ಲೇ ಸರಿಪಡಿಸಿದ್ದಾರೆ. ಚಂದ್ರಹಾಸ ಮತ್ತು ಪ್ರವೀಣ್ ಇವರು ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಈ ಮೊದಲು ಹೆಜಮಾಡಿ ಗ್ರಾಮದಲ್ಲಿ ಇದೇ ರೀತಿ ವಿದ್ಯುತ್ ತಂತಿ ಕಡಿದು ಬಿದ್ದಾಗ ಅದಕ್ಕೆ ಎರಡು ಮಂದಿ ದುರ್ಮರಣಕ್ಕೆ ಬಲಿಯಾಗಿದ್ದನ್ನು ಸ್ಮರಿಸಬಹುದು. ಹೆಜಮಾಡಿ ಗ್ರಾಮದ ಹೆಚ್ಚಿನ ಕಡೆಗಳಲ್ಲಿ ತುಕ್ಕು ಹಿಡಿದಿರುವ ವಿದ್ಯುತ್ ತಂತಿಗಳನ್ನು ಮೆಸ್ಕಾಂ ಇಲಾಖೆಯ ಅಧಿಕಾರಿಗಳು ವಿಶೇಷ ಗಮನಹರಿಸಿ ಆದಷ್ಟು ಶೀಘ್ರದಲ್ಲೇ ಸರಿಪಡಿಸಬೇಕಾಗಿದೆ ಎಂದು ಸಾರ್ವಜನಿಕರು‌ ಆಗ್ರಹಿಸಿದ್ದಾರೆ.
13 Oct 2023, 11:38 PM
Category: Kaup
Tags: