ಕಟಪಾಡಿ : ಅಕ್ಟೋಬರ್ 15 ರಿಂದ 24ರ ವರೆಗೆ ಉಚಿತ ಪ್ರಾಣ ಯೋಗ ಶಿಬಿರ
Thumbnail
ಕಟಪಾಡಿ : ಪತಂಜಲಿ ಯೋಗ ಸಮಿತಿ ಉಡುಪಿ, ಕಟಪಾಡಿ ಕಕ್ಷೆ ಹಾಗೂ ಎಸ್ ವಿ ಎಸ್ ಹಳೆ ವಿದ್ಯಾರ್ಥಿ ಸಂಘ (ರಿ.) ಕಟಪಾಡಿ ಇವರ ಸಹಯೋಗದಲ್ಲಿ ಅಕ್ಟೋಬರ್ 15 ರಿಂದ 24ರ ವರೆಗೆ 10 ದಿನಗಳ ಕಾಲ ಬೆಳಿಗ್ಗೆ 5.30ರಿಂದ 6.45 ರತನಕ ಉಚಿತ ಪ್ರಾಣ ಯೋಗ ಶಿಬಿರವನ್ನು ಕಟಪಾಡಿಯ ಮಹಿಳಾ ಮಂಡಲದ ಸಭಾ ಭವನದಲ್ಲಿ ಆಯೋಜಿಸಲಾಗಿದೆ. ಉಡುಪಿ ಪತಂಜಲಿ ಯೋಗ ಸಮಿತಿಯ ನುರಿತ ಹಿರಿಯ ಯೋಗ ಶಿಕ್ಷಕರಿಂದ ತರಬೇತಿ ನೀಡಲಾಗುವುದು. ಕಟಪಾಡಿ ಪತಂಜಲಿ ಯೋಗ ಸಮಿತಿಯ ಮುಖ್ಯ ಯೋಗ ಶಿಕ್ಷಕ ರಾಜೇಶ್ ಕಾಮತ್ ರವರು ಶಿಬಿರವನ್ನು ಆಯೋಜಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ನಾಗೇಶ್ ಕಾಮತ್ (9886432197)ರವರನ್ನು ಸಂಪರ್ಕಿಸಬಹುದು ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Additional image
14 Oct 2023, 07:50 AM
Category: Kaup
Tags: