ಪಡುಬಿದ್ರಿ : ನೂತನ ಗ್ರಾಮ ಒನ್ ಮತ್ತು ಸೈಬರ್ ಕೆಫೆ, ಬುಕ್ಸ್ ಮತ್ತು ಸ್ಟೇಶನರಿ ಕಚೇರಿ ಶುಭಾರಂಭ
Thumbnail
ಪಡುಬಿದ್ರಿ : ಇಲ್ಲಿನ ಅದಿಧನ್ ಸಾಯಿ ಕೃಪಾ ಕಟ್ಟಡದ ನೆಲ ಮಹಡಿಯಲ್ಲಿ ನೂತನವಾಗಿ ಪ್ರಾರಂಭವಾದ ಪಡುಬಿದ್ರಿ ಗ್ರಾಮ ಒನ್ (ನಾಗರಿಕ ಸೇವಾ ಕೇಂದ್ರ) ಮತ್ತು ಸೈಬರ್ ಕೆಫೆ, ಬುಕ್ಸ್ ಮತ್ತು ಸ್ಟೇಶನರಿ ಕಚೇರಿಯನ್ನು ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ ಉದ್ಘಾಟಿಸಿ ಶುಭ ಹಾರೈಸಿದರು. ಕೇಂದ್ರ ‌ಹಾಗು ರಾಜ್ಯ ಸರ್ಕಾರದ 750 ಕ್ಕೂ ಹೆಚ್ಚಿನ ಯೋಜನೆಗಳಿಗೆ ಅರ್ಜಿಯನ್ನು ಒಂದೇ ಸೂರಿನಲ್ಲಿ ಸಲ್ಲಿಸಬಹುದು ಹಾಗು ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಬುಕ್ಸ್ , ಸ್ಟೇಶನರಿ, ಮತ್ತು ಪ್ರೊಜೆಕ್ಟ್ ವಕ್೯್ಸ ,ಜೆರಾಕ್ಸ್ ಗಳನ್ನು ರಿಯಾಯತಿ ದರದಲ್ಲಿ ಪಡೆಯಬಹುದೆಂದು ಮಾಲಕರಾದ ರಮೀಜ್ ಹುಸೇನ್ ತಿಳಿಸಿದರು. ಈ ಸಂದರ್ಭದಲ್ಲಿ ಪಡುಬಿದ್ರಿ‌ ಗ್ರಾ.ಪಂ. ಅಧ್ಯಕ್ಷೆ ಶಶಿಕಲಾ ಪೂಜಾರಿ, ಉಪಾಧ್ಯಕ್ಷ ಹೇಮಚಂದ್ರ ಸಾಲ್ಯಾನ್, ಮಾಜಿ.ತಾ.ಪಂ ಸದಸ್ಯರಾದ ನವೀನಚಂದ್ರ ಜೆ.ಶೆಟ್ಟಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಶಶಿಕಾಂತ್ ಪಡುಬಿದ್ರಿ , ಮಾಜಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ವೈ. ಸುಕುಮಾರ್, ಕೆ.ಪಿ.ಸಿ.ಸಿ ಕೊ-ಅರ್ಡೀನೇಟರ್ ಅಬ್ಬುಲ್ ಆಜೀಜ್ ಹೆಜಮಾಡಿ, ಪಡುಬಿದ್ರಿ ರೋಟರಿ ಅಧ್ಯಕ್ಷ ಸಂತೋಷ್ ಪಡುಬಿದ್ರಿ, ರಾಜ್ಯ ಜೆಡಿಎಸ್ ಕಾರ್ಯದರ್ಶಿ ಇಸ್ಮಾಯಿಲ್ ಪಲಿಮಾರ್, ಪಡುಬಿದ್ರಿ ಗ್ರಾಮ ಪಂಚಾಯತ್ ಸದಸ್ಯರಾದ ಎಂ.ಎಸ್ ಶಾಫಿ, ಜ್ಯೋತಿ ಮೆನನ್, .ಮಾಜಿ ಸದಸ್ಯ ಬುಡಾನ್ ಸಾಹೇಬ್, ಹಿರಿಯರಾದ ಕೆ.ಎಮ್ ಅಬ್ದುಲ್, ಪಿ ಎ ಹುಸೇನ್, ಸುಚರಿತ ಅಮೀನ್, ಮನ್ಸೂರ್ ಕಂಚಿನಡ್ಕ, ಪುಷ್ಪಲತಾ ಆಚಾರ್ಯ, ಅಬ್ದುಲ್ ರಜಾಕ್, ಹಸನ್ ಕನ್ನಂಗಾರ್ ಮತ್ತಿತರರು ಉಪಸ್ಥಿತರಿದ್ದರು.
Additional image
14 Oct 2023, 12:58 PM
Category: Kaup
Tags: