ಉಚ್ಚಿಲ : ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಸಾರ್ವಜನಿಕರ ಮನಸೂರೆಗೊಂಡ ವೀಣಾವಾದನ
Thumbnail
ಉಚ್ಚಿಲ : ಶ್ರೀ ಮಹಾಲಕ್ಷ್ಮಿ ದೇವಸ್ಥಾನ ಉಚ್ಚಿಲದಲ್ಲಿ ಗುರುವಾರ ಸಂಜೆ ನವದುರ್ಗೆಯರ ಸಮ್ಮುಖದಲ್ಲಿ ವೀಣಾವಾದನ ಜರಗಿತು. 9 ಜನ ಪಕ್ಕ ವಾದ್ಯ ಸಹಿತ ಕಿರಿಯರಿಂದ ಹಿರಿಯರಾದಿಯಾಗಿ 151 ವೀಣಾವಾದಕರು ವೀಣಾವಾದನ ನಡೆಸಿಕೊಟ್ಟರು. ಸುಮಾರು ಒಂದು ಗಂಟೆಗಳ ಕಾಲ ನಡೆದ ವೀಣಾವಾದನ ಸಾರ್ವಜನಿಕರ ಮನಸೂರೆಗೊಂಡಿತು. ಸನ್ಮಾನ/ಬಿರುದು : ಶತವೀಣಾ ವಾದನದ ನೇತೃತ್ವ ವಹಿಸಿದ್ದ ವಿದುಷಿ ಪವನ ಬಿ. ಆಚಾರ್ ರನ್ನು ಶ್ರೀ ಕ್ಷೇತ್ರದ ವತಿಯಿಂದ ಸನ್ಮಾನಿಸಿ ವೀಣಾ ವಿಭೂಷಣೆ ಬಿರುದು ನೀಡಿ‌ ಗೌರವಿಸಲಾಯಿತು. ಈ ಸಂದರ್ಭ ಕ್ಷೇತ್ರದ ಸಲಹೆಗಾರ ನಾಡೋಜ ಜಿ‌. ಶಂಕರ್ ಮಾತನಾಡಿ‌ ಕಳೆದ ಬಾರಿ 121 ವೀಣಾವಾದನವಿತ್ತು. ಈ ಬಾರಿ 151 ವೀಣಾ ಮಂದಿ‌ಯ ವೀಣಾವಾದನವಿದ್ದು, ಮುಂದಿನ ದಸರಾದ ಸಂದರ್ಭ 201 ವೀಣಾವಾದನವನ್ನು ಆಯೋಜಿಸಲಾಗುವುದು ಎಂದರು. ಈ ಸಂದರ್ಭ ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ.ಕೋಟ್ಯಾನ್, ದೇವಳದ ಅರ್ಚಕ ರಾಘವೇಂದ್ರ ಉಪಾಧ್ಯಾಯ, ವ್ಯವಸ್ಥಾಪಕ ಸತೀಶ್ ಅಮೀನ್ ಮತ್ತಿತರರು ಉಪಸ್ಥಿತರಿದ್ದರು.
Additional image
20 Oct 2023, 01:33 PM
Category: Kaup
Tags: