ಕಾಪು : ಗಾಲಿ ಕುರ್ಚಿಯ ಮೂಲಕ ಕೇರಳ - ಕೊಲ್ಲೂರು ದೇವಳ ಭೇಟಿ
ಕಾಪು : ಜೀವನದಲ್ಲಿ ಭಯ,ಭಕ್ತಿ, ನಂಬಿಕೆಗಳು ಮನುಷ್ಯನನ್ನು ರೂಪಿಸಲು ಇರುವ ಮಾರ್ಗಗಳು. ನ್ಯೂನತೆಗಳಿದ್ದರೂ ದೇವರ ಮೇಲಿನ ಭಕ್ತಿ ವ್ಯಕ್ತಿಗೆ ಶಕ್ತಿ ನೀಡುವುದರಲ್ಲಿ ಎರಡು ಮಾತಿಲ್ಲ. ಅಂತೆಯೇ ಇಲ್ಲೋರ್ವ ಅಂಗವಿಕಲತೆ ಇದ್ದರೂ ದೇವರ ಮೇಲಿನ ಭಕ್ತಿಯಿಂದ ಗಾಲಿ ಕುರ್ಚಿಯ ಮೂಲಕ ದೇವಾಲಯ ಭೇಟಿ ನೀಡುತ್ತಿದ್ದಾರೆ.
ಕೇರಳದ ಕಣ್ಣನ್ ಅಯ್ಯಪ್ಪ ಮಾಲಾಧಾರಿಯಾಗಿ ಕೇರಳದ ಶಬರಿಮಲೆಯಿಂದ ಕೊಲ್ಲೂರು ಮೂಕಾಂಬಿಕೆಯ ಸನ್ನಿಧಾನಕ್ಕೆ ತೆರಳಲಿದ್ದಾರೆ.
ಕಾಪುವಿಗೆ ಆಗಮಿಸಿದ್ದ ಸಂದರ್ಭ ನಮ್ಮ ಕಾಪು ನ್ಯೂಸ್ ವೆಬ್ ಪೋರ್ಟಲ್ ನೊಂದಿಗೆ ಮಾತನಾಡಿದ ಅವರು ಈಗಾಗಲೇ 15 ದಿನಗಳನ್ನು ಗಾಲಿ ಕುರ್ಚಿಯ ಮೂಲಕ ಕ್ರಯಿಸಿದ್ದೇನೆ. 21 ದಿನದ ಒಳಗೆ ಯಾತ್ರೆ ಸಂಪೂರ್ಣಗೊಳಿಸಬೇಕೆಂದಿದ್ದೇನೆ. ಸಾರ್ವಜನಿಕರ ಸಹಕಾರ ಅಗತ್ಯ. ಯಾರಾದರೂ ದಾನಿಗಳು ಕಾಣಿಕೆ ನೀಡುವುದಿದ್ದರೆ ಅದನ್ನು ಸ್ವೀಕರಿಸಲು ಸಿದ್ಧನಿದ್ದೇನೆ ಎಂದರು.
ಒಟ್ಟಿನಲ್ಲಿ ದೇವರ ಮೇಲೆ ಭಕ್ತಿ ಇದ್ದಲ್ಲಿ ದೈಹಿಕ ನ್ಯೂನತೆಗಳು ನಗಣ್ಯ.
