ವಿಶ್ವಕರ್ಮ ಯುವ ಮಿಲನ್ ಸಂಘದ ಘಟಕಗಳ ಉದ್ಘಾಟನೆ
Thumbnail
ಉಡುಪಿ : ವಿಶ್ವಕರ್ಮ ಯುವ ಮಿಲನ್(ರಿ.)ಕರ್ನಾಟಕ ರಾಜ್ಯ, ಕೇಂದ್ರ ಕಚೇರಿ ಮಂಗಳೂರು, ಇದರ ರಾಜ್ಯಾಧ್ಯಕ್ಷರಾದ ವಿಕ್ರಮ್ ಐ. ಆಚಾರ್ಯರು ಸಂಘದ ವಿವಿಧ ಘಟಕಗಳನ್ನು ಉದ್ಘಾಟಿಸಿದರು. ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಕಿಕ್ಕೇರಿ ಹೋಬಳಿ, ಶೀಲನೆರೆ ಹೋಬಳಿ, ಬುಕನಕೆರೆ ಹೋಬಳಿ, ಅಕ್ಕಿ ಹೆಬ್ಬಾಳು ಮತ್ತು ಕಸಬಾ ಹೊಬ್ಬಳ್ಳಿಯಲ್ಲಿ ಮಂಡ್ಯ ವಿಶ್ವಕರ್ಮ ಯುವ ಮಿಲನ್ ಸಂಘದ ಘಟಕಗಳ ಉದ್ಘಾಟನೆ ಮಾಡಲಾಯಿತು. ಯುವ ಸಂಘಟನೆಯು ಬೆಂಕಿಯಂತೆ ಇರಬೇಕು, ಸಮಾಜದ ರಕ್ಷಣೆ ಹಾಗೂ ಸಮಾಜದ ಒಗ್ಗಟ್ಟಿಗೆ ಯುವ ಶಕ್ತಿ ಮುಖ್ಯ ಎಂಬುದಾಗಿ ರಾಜ್ಯಾಧ್ಯಕ್ಷರು ತಿಳಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಮೋಹನ್ ಆಚಾರ್ಯ, ಕೆ.ಆರ್.ಪೇಟೆ ತಾಲೂಕು ಅಧ್ಯಕ್ಷರಾದ ವಿಜಯ್ ಕುಮಾರ್, ಪುರ ಗ್ರಾಮ ಘಟಕ ಅಧ್ಯಕ್ಷ ವಿಜಯ್ ಕುಮಾರ್, ಆಕಾಶ್ ಆಚಾರ್ಯ ಪಾಂಡೇಶ್ವರ ಹಾಗೂ ಎಲ್ಲಾ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
20 Oct 2023, 01:52 PM
Category: Kaup
Tags: