ಕಾಪು : ಮಟ್ಟಾರುವಿನಲ್ಲಿ ದುರ್ಗಾಷ್ಟಮಿ ಉತ್ಸವ ಕಾರ್ಯಕ್ರಮ
Thumbnail
ಕಾಪು‌‌ : ವಿಶ್ವ ಹಿಂದೂ ಪರಿಷದ್ ಬಜರಂಗದಳ ಮಾತೃಶಕ್ತಿ ದುರ್ಗಾವಾಹಿನಿ ಮಟ್ಟಾರು ನೇತೃತ್ವದಲ್ಲಿ ದುರ್ಗಾಷ್ಟಮಿ ಉತ್ಸವ ಕಾರ್ಯಕ್ರಮ ಮಟ್ಟಾರು ಬಯಲು ರಂಗಮಂದಿರದಲ್ಲಿ ಜರಗಿತು. ಮಾತೃಶಕ್ತಿ ಉಡುಪಿ ಜಿಲ್ಲಾ ಪ್ರಮುಖ್ ಪೂರ್ಣಿಮಾ ಸುರೇಶ್ ದುರ್ಗಾಷ್ಟಮಿ ಉತ್ಸವದ ಸಂದೇಶ ನೀಡಿದರು. ಮಟ್ಟಾರು ಘಟಕ ಮಾತೃಶಕ್ತಿ ಪ್ರಮುಖ್ ಸುಮತಿ ಸಾಲ್ಯಾನ್ ಸಭಾಧ್ಯಕ್ಷತೆ ವಹಿಸಿದ್ದರು. ಶಿರ್ವ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ವಾರಿಜಾ ಪೂಜಾರಿ, ಹಿಂದೂ ಜೂನಿಯರ್ ಕಾಲೇಜು ಉಪನ್ಯಾಸಕಿ ಸುಪ್ರೀತಾ ಶೆಟ್ಟಿ, ಉಪ ಆರೋಗ್ಯ ಕೇಂದ್ರದ ಪ್ರಾಥಮಿಕ ಸುರಕ್ಷಾಧಿಕಾರಿ ಗೀತಾ, ಮಾತೃಶಕ್ತಿ ಕಾಪು ಪ್ರಖಂಡ ಸಹಪ್ರಮುಖ್ ಉಷಾ ಪಾಟ್ಕರ್, ದುರ್ಗಾವಾಹಿನಿ ಮಟ್ಟಾರು ಸಂಚಾಲಕಿ ಕುಮಾರಿ ಶ್ವೇತಾ ರಾವ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕು.ಶ್ವೇತಾ ರಾವ್ ಸ್ವಾಗತಿಸಿದರು. ಕು.ಶ್ರೀರಕ್ಷಾ ಆಚಾರ್ಯ ವಂದಿಸಿದರು. ಭಜನೆ, ದುರ್ಗಾಪೂಜೆ ಮತ್ತು ಪ್ರಸಾದ ವಿತರಣೆ ಜರಗಿತು.
23 Oct 2023, 11:25 AM
Category: Kaup
Tags: