ಶಿರ್ವ : ಚಂದ್ರನಗರದಲ್ಲಿ ಆರೋಗ್ಯ ಮಾಹಿತಿ ಶಿಬಿರ
Thumbnail
ಶಿರ್ವ : ರೋಟರಿ ಕ್ಲಬ್ ಶಿರ್ವ ಆಶ್ರಯದಲ್ಲಿ ಚಂದ್ರನಗರದ ಬಟರ್ ಫ್ಲೈ ಗೆಸ್ಟ್ ಹೌಸ್ ಮತ್ತು ಪಾರ್ಟಿ ಹಾಲ್ ಸಭಾಂಗಣದಲ್ಲಿ ಆರೋಗ್ಯ ಮಾಹಿತಿ ಶಿಬಿರವನ್ನು ಶಿರ್ವ ರೋಟರಿ ಕ್ಲಬ್ ಅಧ್ಯಕ್ಷರಾದ ಫಾರೂಕ್ ಚಂದ್ರನಗರ ಉದ್ಘಾಟಿಸಿದರು. ಸನ್ಮಾನ : ಪ್ರೊಫೆಸರ್ ಹಾಗೂ ವೈದ್ಯಾಧಿಕಾರಿ ವಿ.ಪಿ.ಎ.ಎಂ.ಸಿ ವಡ್ನಗರ್ ಅಹಮದಬಾದ್, ಡಾ. ಶಿಬ್ಗತ್ಉಲ್ಲಾ ಶರೀಫ್ ಆರ್ ರವರನ್ನು ಸನ್ಮಾನಿಸಲಾಯಿತು. ತದ ನಂತರ ಆರೋಗ್ಯದ ಬಗ್ಗೆ ಮಾಹಿತಿ ನೀಡಲಾಯಿತು. ಈ ಸಂದರ್ಭದಲ್ಲಿವಿಲಿಯಮ್ ಮಚದೊ, ರಘುಪತಿ ಐತಾಳ್, ಫಿಲಿಫ್ ಕೇಸ್ತಾಲಿನೋ, ದಿವಾಕರ ಡಿ ಶೆಟ್ಟಿ, ಮೇಲ್ವಿನ್ ಡಿಸೋಜ, ಮೈಕಲ್ ಮತಾಯಸ್, ದಿವಾಕರ ಬಿ ಶೆಟ್ಟಿ ಕಳತ್ತೂರು ಮತ್ತಿತರರು ಉಪಸ್ಥಿತರಿದ್ದರು.
23 Oct 2023, 01:04 PM
Category: Kaup
Tags: