ಓಮನ್ ಬಿಲ್ಲವಾಸ್ : ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಬ್ರಹ್ಮಶ್ರೀ ನಾರಾಯಣಗುರು ಪೂಜೆ ಸಂಪನ್ನ
Thumbnail
ಗಲ್ಫ್ ರಾಷ್ಟ್ರದ ರಾಜಧಾನಿ ಮಸ್ಕಟ್ ನಲ್ಲಿ ಓಮನ್ ಬಿಲ್ಲವಾಸ್ ಸಂಘಟನೆಯ ವತಿಯಿಂದ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಬ್ರಹ್ಮಶ್ರೀ ನಾರಾಯಣಗುರು ಪೂಜೆ ಬಹಳ ವಿಜೃಂಭಣೆಯಿಂದ ಶ್ರೀ ಕೃಷ್ಣ ದೇವಸ್ಥಾನದಲ್ಲಿ ಸಂಪನ್ನಗೊಂಡಿತು. ಪುರೋಹಿತರಾದ ಶ್ರೀ ಚರಣ್ ಶಾಂತಿ ಕಟಪಾಡಿ ಯವರ ನೇತೃತ್ವದಲ್ಲಿ ದೇವರ ವಿಸ್ತಾರವಾದ ಕಥೆ, ಭಕ್ತಿಯ ಪೂಜಾ ಕೈಂಕರ್ಯ, ಭಜನೆ, ಚೆಂಡೆ, ಮಹಿಳೆಯರಿಂದ ಕಳಸ ಪ್ರದಾನ ನೃತ್ಯ ಹಾಗೂ ಸೇರಿದ ಜನರ ಭಕ್ತಿ ಭಾವದೊಂದಿಗೆ ಕಾರ್ಯಕ್ರಮವು ಬಹಳ ಸುಸೂತ್ರವಾಗಿ ನೆರವೇರಿಸಲ್ಪಟ್ಟಿತು. ಈ ಸಂಧರ್ಭ ಓಮನ್ ಬಿಲ್ಲವಾಸ್ ಸಂಘಟನೆಯ ಅಧ್ಯಕ್ಷ ಸುಜಿತ್ ಅಂಚನ್, ಮಾಜಿ ಅಧ್ಯಕ್ಷ ಹಾಗೂ ಸ್ಥಾಪಕ ಸದಸ್ಯ ಎಸ್. ಕೆ. ಪೂಜಾರಿ, ಕಾರ್ಯಕಾರಿ ಸಮಿತಿ, ಸದಸ್ಯರು, ವಿವಿಧ ಸಂಘಟನೆಗಳ ಮುಖ್ಯಸ್ಥರು ಹಾಗೂ ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು. B
Additional image
28 Oct 2023, 03:22 PM
Category: Kaup
Tags: