ಉಡುಪಿ : ಮತ್ಸ್ಯ ಮೇಳ - 2023 ಕಾರ್ಯಕ್ರಮ
Thumbnail
ಉಡುಪಿ : ಜಲಾನಯನ ಅಭಿವೃದ್ಧಿ ಇಲಾಖೆ, ಮೀನುಗಾಲಕ ಇಲಾಖೆ, ಸ್ಕೊಡ್ ವೆಸ್ ಸಂಸ್ಥೆ-ಶಿರಸಿ ಮತ್ತು ಉಡುಪಿ, ಕಿನಾರ ಮೀನುಗಾರರ ಉತ್ಪಾದಕ ಕಂಪನಿ ಅಮಿಟೆಡ್ ಇವರ ಜಂಟಿ ಆಶ್ರಯದಲ್ಲಿ ಶನಿವಾರ ಲಕ್ಷ್ಮೀ ಸೋಮ ಬಂಗೇರ ಸಹಕಾರಿ ಪ್ರಥಮ ದರ್ಜೆ ಕಾಲೇಜು ಕೋಟ ಇಲ್ಲಿ ಮತ್ಸ್ಯ ಮೇಳ - 2023 ಕಾರ್ಯಕ್ರಮ ಜರಗಿತು. ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ ಕಡಲನ್ನು ನಂಬಿಕೊಂಡು ಬದುಕು ಕಟ್ಟಿಕೊಂಡವರು ಮೊಗವೀರ ಸಮಾಜದವರು. ದೋಣಿಯ ಮೂಲಕ ಆರಂಭವಾದ ಮೀನುಗಾರಿಕಾ ಚಟುವಟಿಕೆ ಇಂದು ದೋಣಿಯ ಜೊತೆಯಲ್ಲಿ ಯಂತ್ರೋಪಕರಣಗಳ ಸಹಾಯದಿಂದ ಮುಂದುವರೆಯುತ್ತದೆ ಜೊತೆಗೆ ಅನೇಕರಿಗೆ ಉದ್ಯೋಗಾವಕಾಶ ಮಾಡಿಕೊಟ್ಟಿದೆ ಎಂದರು. ಈ ಸಂದರ್ಭ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಕಿರಣ್ ಕುಮಾರ್ ಕೊಡ್ಗಿ, ವಿಧಾನ ಪರಿಷತ್ ಸದಸ್ಯರು, ಮಾಜಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಜಯಪ್ರಕಾಶ್ ಹೆಗ್ಡೆ, ಗೀತಾಂನದ ಫೌಂಡೇಶನ್ ಕೋಟ ಪಡುಕೆರೆ ಪ್ರವರ್ತಕರಾದ ಆನಂದ್ ಸಿ ಕುಂದರ್, ಉಡುಪಿ ಕಿನಾರ ಮೀನುಗಾರರ ಉತ್ಪಾದಕ ಕಂಪನಿ ಲಿಮಿಟೆಡ್ ಅಧ್ಯಕ್ಷರಾದ ಲೋಹಿತ್ ಖಾರ್ವಿ, ಕೋಟ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜ್ಯೋತಿ ಭರತ್ ಕುಮಾರ್ ಶೆಟ್ಟಿ, ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸತೀಶ್ ಕುಂದರ್, ಸ್ಕೊಡ್ ವೆಸ್ ಸಂಸ್ಥೆ ಕಾರ್ಯ ನಿರ್ವಾಹಕರಾದ ಡಾ. ವೆಂಕಟೇಶ ಎಲ್. ನಾಯ್ಕ್, ಹನುಮಂತಪ್ಪ, ಮೀನುಗಾರಿಕಾ ಜಂಟಿ ನಿರ್ದೇಶಕರಾದ ವಿವೇಕ್ ಉಪಸ್ಥಿತರಿದ್ದರು.
Additional image
28 Oct 2023, 08:05 PM
Category: Kaup
Tags: