ಪಡುಬಿದ್ರಿ : ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಕರಾವಳಿ ಸ್ಟಾರ್ಸ್ ನಡಿಪಟ್ಣ ವತಿಯಿಂದ ಧ್ವಜಾರೋಹಣ, ಸ್ವಚ್ಛತಾ ಕಾರ್ಯಕ್ರಮ
ಪಡುಬಿದ್ರಿ : ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಕರಾವಳಿ ಸ್ಟಾರ್ಸ್ ನಡಿಪಟ್ಣ ಪಡುಬಿದ್ರಿ ಸಂಸ್ಥೆಯ ವತಿಯಿಂದ ಬುಧವಾರ
ಧ್ವಜಾರೋಹಣ ಕಾರ್ಯಕ್ರಮ ಮತ್ತು ಸ್ವಚ್ಛತಾ ಕಾರ್ಯಕ್ರಮ ನಡೆಯಿತು.
ಧ್ವಜಾರೋಹಣವನ್ನು ಕರಣ್ ಗೇಮ್ ಝೋನ್ ಪಡುಬಿದ್ರಿ ಇದರ ಮಾಲೀಕರಾದ ಕಿರಣ ಪ್ರತಾಪ್ ಸಾಲಿಯಾನ್ ನೆರವೇರಿಸಿದರು.
ಕರಾವಳಿ ಸ್ಟಾರ್ಸ್ ನಡಿಪಟ್ಣ ಪಡುಬಿದ್ರಿ ಸಂಸ್ಥೆಯ ಸದಸ್ಯರಿಂದ ಸ್ವಚ್ಛತಾ ಕಾರ್ಯಕ್ರಮದ ಅಂಗವಾಗಿ ಹದಗೆಟ್ಟಿದ್ದ ಪಡುಬಿದ್ರಿಯ ಬೀಚ್ ರಸ್ತೆಯ ದುರಸ್ತಿ ಕಾರ್ಯ ನಡೆಯಿತು. ಈ ಕಾರ್ಯವು ಸಾರ್ವಜನಿಕ ವಲಯದಲ್ಲಿ ಶ್ಲಾಘನೆಗೆ ಪಾತ್ರವಾಗಿದೆ.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಆಶಿಕ್ ಅಮೀನ್, ಸಂಸ್ಥೆಯ ಸ್ಥಾಪಕರಾದ ಕಿರಣ್ ರಾಜ್ ಕರ್ಕೇರ, ಸಂತೋಷ್ ಸಾಲಿಯಾನ್, ಶಶಿಕಲಾ ಕಾಡಿಪಟ್ಣ, ಸಾಗರ್ ವಿದ್ಯಾ ಮಂದಿರ, ಗಣಪತಿ ಪ್ರೌಢಶಾಲೆ ವಿದ್ಯಾರ್ಥಿಗಳು, ಸಂಸ್ಥೆಯ ಸದಸ್ಯರು ಉಪಸ್ಥಿತರಿದ್ದರು.
