ಮುದರಂಗಡಿ : ವಿದ್ಯಾನಗರ ಫ್ರೆಂಡ್ಸ್ ವತಿಯಿಂದ ವಿವಿಧ ಸಮಾಜಮುಖಿ ಕಾರ್ಯಗಳು
ಮುದರಂಗಡಿ : ವಿದ್ಯಾನಗರ ಫ್ರೆಂಡ್ಸ್ ವಿದ್ಯಾನಗರ ಮುದರಂಗಡಿ ಹಾಗೂ ಊರಿನ ಸಹೃದಯಿ ದಾನಿಗಳ ಸಹಯೋಗದೊಂದಿಗೆ ದೀಪಾವಳಿಯಂದು ವಿವಿಧ ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಳ್ಳಲಾಯಿತು.
ಸಾವಿತ್ರಿ ಆಚಾರ್ಯ ಮೈಕೋಡಿ ಇವರ ಮನೆಯ ಟಾಯ್ಲೆಟ್ ಸಂಪೂರ್ಣವಾಗಿ ಕುಸಿದು ಬೀಳುವ ಸ್ಥಿತಿಯಲ್ಲಿದ್ದು, ಅದನ್ನು ಸಂಪೂರ್ಣವಾಗಿ ಪುನನಿರ್ಮಿಸಿ ಹಸ್ತಾಂತರಿಸಲಾಯಿತು.
ವಿದ್ಯಾನಗರದಲ್ಲಿ ಅಳವಡಿಸಿದ ರೋಡ್ ಮಿರರ್ ಉದ್ಘಾಟನೆ ಹಾಗೂ ಒಂದು ಮಗುವಿನ ವೈದ್ಯಕೀಯ ಚಿಕಿತ್ಸೆಗೆ ಆರ್ಥಿಕ ನೆರವು,
ಒಂದು ವಿದ್ಯಾರ್ಥಿಯ ಶಾಲಾ ಶುಲ್ಕವನ್ನು ಗಣ್ಯರ ಉಪಸ್ಥಿತಿಯಲ್ಲಿ ನೀಡಲಾಯಿತು.
ಈ ಸಂದರ್ಭದಲ್ಲಿ ಶ್ರೀ ದುರ್ಗಾ ಮಂದಿರದ ಅರ್ಚಕರಾದ ಶ್ರೀಧರ ಆಚಾರ್ಯ, ಉದ್ಯಮಿಗಳಾದ ಗಂಗಾಧರ್ ಶೆಟ್ಟಿ ಮತ್ತು ವಿಶ್ವನಾಥ್ ಶೆಟ್ಟಿ, ಹರಿ ಎಚ್ ಮೈಕೋಡಿ, ಗ್ರಾಮ ಪಂಚಾಯತ್ ಸದಸ್ಯರಾದ ಶಿವರಾಮ್ ಭಂಡಾರಿ ಸ್ಥಳೀಯರಾದ ರಾಮ ಪೂಜಾರಿ ಹಾಗೂ ವಿದ್ಯಾ ನಗರ ಫ್ರೆಂಡ್ಸ್ ನ ಸರ್ವ ಸದಸ್ಯರು ಉಪಸ್ಥಿತರಿದ್ದರು.
