ನವೆಂಬರ್ ೧೮ : ಎರ್ಮಾಳುವಿನಲ್ಲಿ ಸ್ವಾತಂತ್ರ್ಯ ಹೋರಾಟಗಾರರಾದ ದಿ. ರಾಮಪ್ಪ ಜಿ. ಸಾಲಿಯಾನ್ ಸಂಸ್ಮರಣೆ
ಎರ್ಮಾಳು : ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಾಪು ತಾಲೂಕು ಘಟಕದ ವತಿಯಿಂದ "ಅಮೃತ ಭಾರತಿಗೆ ಕನ್ನಡದ ಆರತಿ" ಕಾರ್ಯಕ್ರಮದಡಿಯಲ್ಲಿ ಸ್ವಾತಂತ್ರ್ಯ ಸೇನಾನಿಗಳ ನೆನಪಿನಲ್ಲಿ ಸ್ವಾತಂತ್ರ್ಯ ಹೋರಾಟಗಾರರಾದ ದಿ.ರಾಮಪ್ಪ ಜಿ. ಸಾಲಿಯಾನ್‌ರವರ ಸಂಸ್ಮರಣೆ "ಅಮೃತಾಂಜಲಿ" ಕಾರ್ಯಕ್ರಮ ನವೆಂಬರ್ ೧೮ ಶನಿವಾರ ಸಾಯಂ ಗಂಟೆ ೪ ಕ್ಕೆ ಬಡ ಗ್ರಾ.ಪಂ.ವ್ಯಾಪ್ತಿಯ ಎರ್ಮಾಳುವಿನಲ್ಲಿ ಹೋರಾಟಗಾರರ ಹಿರಿಯ ಮಗಳು ಶಾರದಾ ಆರ್ ಸಾಲಿಯಾನ್ ಇವರ ನಿವಾಸ "ಸಿದ್ಧಿವಿನಾಯಕ"ದಲ್ಲಿ ಜರುಗಲಿದೆ.
ಬಂಟಕಲ್ಲು ಶ್ರೀಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ತಿರುಮಲೇಶ್ವರ ಭಟ್ ಇವರು ಹೋರಾಟಗಾರರಾದ ದಿ.ಆರ್.ಜಿ.ಸಾಲಿಯಾನ್‌ರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡುವರು.
ಕಾಪು ತಾಲೂಕು ಕಸಾಪ ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ಅಧ್ಯಕ್ಷತೆ ವಹಿಸುವರು. ಶಾರದಾ ಆರ್ ಸಾಲಿಯಾನ್ ನುಡಿ ನಮನ ಸಲ್ಲಿಸುವರು. ಮುಖ್ಯ ಅಭ್ಯಾಗತರಾಗಿ ಬಡಾ ಗ್ರಾಮ ಪಂಚಾಯತ್ ಅಧ್ಯಕ್ಷ ಶಿವಕುಮಾರ್, ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹರೀಶ್ ಕುಮಾರ್ ಹೆಜ್ಮಾಡಿ, ಮೋಹನ್ ಬಂಗೇರ ಕಾಪು, ಕಸಾಪ ಉಡುಪಿ ಜಿಲ್ಲಾ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಭಾಗವಹಿಸುವರು. ನಿವೃತ್ತ ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ಮಧುಕರ್ ಎಸ್.ಯು.ಕಲ್ಯಾ ಕಾರ್ಯಕ್ರಮ ಸಂಯೋಜಿಸುವರು ಎಂದು ಕಾಪು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಕಟನೆ ತಿಳಿಸಿದೆ.
